ಮಜೀರ್ಪಳ್ಳದಲ್ಲಿ ಬಿಎಂಎಸ್ ಮಂಜೇಶ್ವರ, ಕುಂಬಳೆ ವಲಯ ಸಮಿತಿಯಿಂದ ವಿಶ್ವಕರ್ಮ ಜಯಂತಿ
ವರ್ಕಾಡಿ: ಭಾರತೀಯ ಮಜ್ದೂರ್ ಸಂಘ ಮಂಜೇಶ್ವರ ಹಾಗೂ ಕುಂಬಳೆ ವಲಯ ಸಮಿತಿಯ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ದಿನವಾದ ನಿನ್ನೆ ರಾಷ್ಟೀಯ ಕಾರ್ಮಿಕ ದಿನವನ್ನು ಕಾರ್ಮಿಕರ ಮೆರವಣಿಗೆಯೊಂದಿಗೆ ಆಚರಿಸಲಾ ಯಿತು. ಪಂಚಾಯತ್ನ ಬೇಕರಿ ಜಂಕ್ಷನ್ ನಿಂದ ಕಾರ್ಮಿಕರ ಮೆರವ ಣಿಗೆ ಆರಂಭಗೊAಡು ಮಜೀರ್ ಪಳ್ಳ ದಲ್ಲಿ ಸಾರ್ವಜನಿಕ ಸಬೆs ನಡೆಯಿತು. ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿ, ಜಿಲ್ಲಾ ಪದಾಧಿಕಾರಿ ಗಳಾದ ಹರೀಶ್ ಕುದ್ರೆಪ್ಪಾಡಿ. ಯಶವಂತಿ ಬೆಜ್ಜ. ಬಾಬು ಮೊನ್ ಚೆರ್ಕಳ ಶುಭಾಶಂಸನೆಗೈದರು. ಜಿಲ್ಲಾ ಸಮಿತಿ ಸದಸ್ಯೆ ಶೋಭ ಎನ್. ನಾಯ್ಕಾಪು, ಮಂಜೇಶ್ವರ ವಲಯ ಅಧ್ಯಕ್ಷ ರವಿ ಎಂ ಕೆ. ಮಿತ್ತ ಕೋಳ್ಯೂರು, ಕುಂಬಳೆ ವಲಯ ಅಧ್ಯಕ್ಷ. ವೇಣು ಗೋಪಾಲ್ ಮುಗು. ಕಾರ್ಯದರ್ಶಿ. ಶಶಿಧರ ಕುಂಟAಗೇರಡ್ಕ. ನಿರ್ಮಾಣ ಕಾರ್ಮಿಕ ಸಂಘ ಜಿಲ್ಲಾ ಜೊತೆ ಕಾರ್ಯ ದರ್ಶಿ ಚಂದ್ರಶೇಖರ ವರ್ಕಾಡಿ. ಉಪಸ್ಥಿತರಿದ್ದರು. ವೇಣುಗೋಪಾಲ್ ಮುಗು ಸ್ವಾಗತಿಸಿ, ಐತ್ತಪ್ಪ ನಾರಾಯಣ ಮಂಗಲ ವಂದಿಸಿದರು. ಶಿವಾನಂದ ರಾವ್ ನಿರೂಪಿಸಿದರು