ಮಜೀರ್ಪಳ್ಳದಲ್ಲಿ ರೈತ ಕಾರ್ಮಿಕ ವಿಚಾರಗೋಷ್ಠಿ
ಮಂಜೇಶ್ವರ: ಸಿಪಿಎಂ ಮಂಜೇ ಶ್ವರ ಏರಿಯಾ ಸಮ್ಮೇಳನದಂಗವಾಗಿ ವರ್ಕಾಡಿ ಮಜಿರ್ಪಳ್ಳದಲ್ಲಿ ರೈತ – ರೈತ ಕಾರ್ಮಿಕ ವಿಚಾರಗೋಷ್ಠಿ ನಡೆ ಯಿತು. ರೈತಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಜನಾರ್ಧನನ್ ಉದ್ಘಾಟಿಸಿದರು. ಕೆಎಸ್ ಕೆ ಟಿ ಯು ಏರಿಯಾ ಕಾರ್ಯ ದರ್ಶಿ ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ರೈತಸಂಘ ರಾಜ್ಯ ಸಮಿತಿ ಸದಸ್ಯ ಕೆ. ಆರ್. ಜಯಾನಂದ, ರೈತಸಂಘ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಅಬ್ದುಲ್ ರಸಾಕ್ ಚಿಪ್ಪಾರ್, ಡಿ. ಬೂಬ, ಬಾಳಪ್ಪ ಬಂಗೇರ, ಭಾರತಿ ಸುಳ್ಯಮೆ, ಚಂದ್ರಹಾಸ ಶೆಟ್ಟಿ ಮಾಸ್ಟರ್, ನವೀನ. ಟಿ ಭಾಗವಹಿಸಿದರು.