ಮತಗಟ್ಟೆ ಬಳಿ ಸುದ್ದಿಗಾರರ ಮೇಲೆ ಹಲ್ಲೆ: 10 ಮಂದಿ ವಿರುದ್ಧ ಕೇಸು ದಾಖಲು

ಕಾಸರಗೋಡು: ಚೆರ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ಮತಗಳು ನಡೆಯುವ ವೇಳೆ ಸುದ್ದಿ ಸಂಗ್ರಹಿಸಲೆಂದು ಅಲ್ಲಿಗೆ ಹೋದ ಕೈರಳಿ ಸುದ್ದಿ ಚ್ಯಾನೆಲ್‌ನ ಬ್ಯೂರೋ ಸಜಿಕಣ್ಣನ್ ಮತ್ತು ಕ್ಯಾಮರಾಮ್ಯಾನ್ ಕೆ.ಕೆ. ಶೈಜು ಪಿಲಾತ್ತರರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಶೈಜು ನೀಡಿದ ದೂರಿನಂತೆ ೧೦ ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾತೃಭೂಮಿ ನ್ಯೂಸ್ ವರದಿಗಾರ ಸಾರಂಗ್, ಮಾತೃಭೂಮಿ ಪತ್ರಿಕೆಯ ವರದಿಗಾರ  ಪ್ರದೀಪ್ ಕುಮಾರ್‌ರ ಮೇಲೂ ನಿನ್ನೆ ಅದೇ ಸ್ಥಳದಲ್ಲಿ ಒಂದು ಗುಂಪು ಹಲ್ಲೆ ನಡೆಸಿದೆ. ಆ ಬಗ್ಗೆಯೂ ಪೊಲೀಸರಿಗೆ ದೂರು ನೀಡಲಾಗಿದೆ. ಸುದ್ದಿಗಾರರ ಮೇಲೆ ಹಲ್ಲೆ ನಡೆಸಿರುವುದನ್ನು ಪತ್ರಕರ್ತರ  ಯೂನಿಯನ್ ತೀವ್ರವಾಗಿ ಖಂಡಿಸಿದೆ. ಆಕ್ರಮಿಗಳ ವಿರುದ್ಧ ತ್ವರಿತವಾಗಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಯೂನಿಯನ್ ಆಗ್ರಹಪಟ್ಟಿದೆ.

You cannot copy contents of this page