ಮತದಾನೋತ್ತರ ಸಮೀಕ್ಷೆಗೆ ನಾಳೆಯಿಂದ ನಿಷೇಧ
ನವದೆಹಲಿ: ದೇಶದಲ್ಲಿ ನಾಳೆ ಯಿಂದ ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಳ್ಳಲಿದ್ದು, ಅದರಿಂದಾಗಿ ಮತದಾನೋತ್ತರ ಸಮೀಕ್ಷೆ ನಾಳೆಯಿಂದ ಪ್ರಕಟಿಸುವು ದಕ್ಕೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ. ಈ ವಿಷಯವನ್ನು ಎಲ್ಲಾ ಮಾಧ್ಯಮ ಕಚೇರಿಗಳಿಗೆ ಆಯೋಗ ತಿಳಿಸಿದೆ.
ಇದರಂತೆ ನಾಳೆಯಿಂದ ಜೂನ್ 1ರ ಸಂಜೆ 6.30ರ ತನಕ ಮತ ದಾನೋತ್ತರ ಸಮೀಕ್ಷೆ ಪ್ರಕಟಿಸದಂತೆ ಎಲ್ಲಾ ಮಾದ್ಯಮ ಕಚೇರಿಗಳಿಗೆ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ತಿಳಿಸಿದೆ.
ನಾಳೆ ಬೆಳಿಗ್ಗೆ 7 ಗಂಟೆಯಿAದ ಜೂನ್ 1ರಂದು ಸಂಜೆ 6.30ರ ನಡುವಿನ ಅವಧಿಯಲ್ಲಿ ಯಾವುದೇ ಮಾಧ್ಯಮಗಳಿಗೂ ಮತದಾನಕ್ಕೆ ಸಂಬAಧಪಟ್ಟ ಅಭಿಪ್ರಾಯ ಸಮೀಕ್ಷೆ ಗಳು ಸೇರಿದಂತೆ ಚುನಾವಣೆಗೆ ಸಂಬA ಧಪಟ್ಟ ಯಾವುದೇ ಫಲಿತಾಂಶವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸ ಲಾಗಿದೆಯೆಂದು ಚುನಾವಣಾ ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಈಬಾರಿ ಲೋಕಸಭಾ ಚುನಾವಣೆ 7 ಹಂತಗಳಲ್ಲಾಗಿ ನಡೆಯಲಿದೆ. ಮೊದಲ ಹಂತದ ಚುನಾವಣೆ ಎಪ್ರಿಲ್ 19, ಎರಡನೇ ಹಂತ ಎ. 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಮತ್ತು ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ.