ಮತದಾರರ ಯಾದಿ ಕಾರ್ಯಾಗಾರ
ಕಾಸರಗೋಡು: ನವೆಂಬರ್ 25,26 ಡಿಸೆಂಬರ್ 2, 3 ರಂದು ತಾಲೂಕು/ ವಿಲ್ಲೇಜ್ ಮಟ್ಟದಲ್ಲಿ ಸ್ಪೆಷಲ್ ಕಾರ್ಯಾಗಾರ ಆಯೋಜಿಸ ಲಾಗಿದೆ. 17 ವರ್ಷ ಪೂರೈಸಿದ ಎಲ್ಲರಿಗೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಎಲ್ಲ ಮತದಾರರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗುವುದು.
ಪರಿಶೀಲನೆಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಅವರು ಅರ್ಹರಾಗಿದ್ದರೆ ಪಟ್ಟಿಯಲ್ಲಿ ಮರು ಸೇರ್ಪಡೆಗೆ ಫಾರ್ಮ್ ನಂಬರ್ 6 ರಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುವುದು. ಅಸ್ತಿತ್ವದಲ್ಲಿರುವ ಮತದಾರರು ತಮ್ಮ ಆಧಾರ್ ನಂಬರನ್ನು ವೋಟರ್ ಐಡಿಯೊಂದಿಗೆ ಲಿಂಕ್ ಮಾಡಲು ಫಾರ್ಮ್ ನಂಬರ್ 6ಬಿ ಯಲ್ಲಿ ಅರ್ಜಿಯನ್ನು ಸಲ್ಲಿಸಲು ಸೌಲಭ್ಯವಿದೆ.