ಮತ್ತೆ ಆನ್‌ಲೈನ್ ವಂಚನೆ: ನೀಲೇಶ್ವರ ನಿವಾಸಿಯ 6.27 ಲಕ್ಷ ರೂ. ಲಪಟಾಯಿಸಿದ ಅಪರಿಚಿತ
ಕಾಸರಗೋಡು: ಆನ್‌ಲೈನ್ ವಂಚನೆಗಳ ವಿರುದ್ಧ ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಸೈಬರ್ ಪೊಲೀಸರು ಜನರಿಗೆ ತಿಳುವಳಿಕಾ ಕಾರ್ಯಕ್ರಮಗಳನ್ನು ಮುಂದುವರಿಸು ತ್ತಿರುವಾಗಲೂ ಆನ್‌ಲೈನ್ ವಂಚನೆಗಳು ಮತ್ತೆ ವ್ಯಾಪಕಗೊಂಡಿದೆ. ನೀಲೇಶ್ವರ ನಿವಾಸಿಯ ದೂರಿನ ಮೇರೆಗೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನೀಲೇಶ್ವರ, ಪಳ್ಳಿಕೆರೆ, ಕುದಿರುಮ್ಮಲ್ ಎಂಬಲ್ಲಿನ ಕೆ. ಶೈಜು ಎಂಬವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. 2023 ಜುಲೈ 30ರಿಂದ ಆಗಸ್ಟ್ 19ರವರೆಗಿನ ದಿನಗಳಲ್ಲಾಗಿ ಶೈಜು ಸ್ಟೋಕ್ ಮಾರ್ಕೆಟ್‌ನಲ್ಲಿ 6,72,800 ರೂ. ಠೇವಣಿ ಇರಿಸಿದ್ದರು. ಸ್ಟೋಕ್ ಮಾರ್ಕೆಟಿಂಗ್ ಬಗ್ಗೆ ತಿಳಿಸುವ ಕಂಪೆನಿ ಎಂಬ ಹೆಸರಲ್ಲಿ ಅಪರಿಚಿತನಾದ ವ್ಯಕ್ತಿ ಶೈಜುವನ್ನು ಪರಿಚಯಗೊಂಡಿದ್ದನು. ಅನಂತರ ತಾನು ವಂಚನೆಗೀಡಾದುದಾಗಿ ಶೈಜುಗೆ ಅರಿವಿಗೆ ಬಂದಿದೆ. ಇದರಂತೆ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.