ಮತ ಎಣಿಕೆ ಸಿದ್ಧತೆ: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಬಶೇಖರ್ರ ಅಧ್ಯಕ್ಷತೆಯಲ್ಲಿ ಮತ ಎಣಿಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಕೌಂಟಿಂಗ್ ಟೇಬಲ್ ಗಳಿಗೂ ಆರ್ಒ, ಎಆರ್ಒ ಟೇ ಬಲ್ಗಳಿಗೂ, ಪೋಸ್ಟಲ್ ಬ್ಯಾಲೆಟ್ ಕೌಂಟಿಂಗ್ ಟೇಬಲ್ಗಳಿಗೂ ಪ್ರತೀ ಅಭ್ಯರ್ಥಿಗೆ ಓರ್ವ ಏಜೆಂಟ್ರನ್ನು ನಿಯುಕ್ತಿಗೊಳಿಸಲು ಹಾಗೂ ಯಮುನಾ ಬ್ಲೋಕ್ನಲ್ಲಿ ಮೀಡಿಯಾ ಸೆಂಟರ್ನಲ್ಲಿ ಮತ ಏಣಿಕೆಯನ್ನು ನೇರವಾಗಿ ಪ್ರದರ್ಶಿಸಲಾಗುವುದೆಂದು ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ ಏಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಏಜೆಂಟರ್ಗಳಿಗೆ ಬ್ಯಾಡ್ಜ್ ನೀಡಲಾಗುವುದು. ಬ್ಯಾಡ್ಜ್ ಲಭಿಸಲು ಏಜೆಂಟರ್ಗಳು ಫಾರ್ಮ್ ೧೮ರಲ್ಲಿ ಅರ್ಜಿ ನೀಡಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಚೇಂಬರ್ನಲ್ಲಿ ಜರಗಿದ ಸಭೆಯಲ್ಲಿ ಚುನಾವಣೆಯ ಡೆಪ್ಯೂಟಿ ಕಲಕ್ಟರ್ ಪಿ ಅಖಿಲ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ರಂಜಿತ್, ಅಬ್ದುಲ್ ಕುಂಞಿ ಚೆರ್ಕಳ, ಎಂ. ಕುಂಞಂಬು ನಂಬ್ಯಾರ್, ಬಾಲಕೃಷ್ಣ ಶೆಟ್ಟಿ, ಬಿ.ಎಂ. ಜಮಾಲ್ ಪಟೇಲ್, ಕೆ.ಪಿ. ಸತೀಶ್ಚಂದ್ರನ್, ಕೆ.ಎ. ಮುಹಮ್ಮದ್ ಹನೀಫ, ಅರ್ಜುನನ್ ತಾಯಲಂಗಾಡಿ, ಸಿ. ಶಿವಶಂಕರನ್, ಪಿ.ಕೆ. ಫೈಸಲ್ ಭಾಗವಹಿಸಿದರು. ಮೇ ೨೪ರಂದು ಇನ್ನೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಲು ತೀರ್ಮಾನಿ ಸಲಾಯಿತು.