ಮದ್ಯ ಸಹಿತ ಓರ್ವ ಸೆರೆ
ಬದಿಯಡ್ಕ: ಕುಂಟಿಕಾನದಲ್ಲಿ ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್‌ನ 60 ಟೆಟ್ರಾ ಪ್ಯಾಕೆಟ್ (10.8 ಲೀಟರ್) ಕರ್ನಾಟಕ ಮದ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅಶ್ವಿತ್ ಕುಮಾರ್ ಸಿ.ಎಚ್. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಳಾದ ಮನೋಜ್ ಪಿ, ಜೋನ್‌ಸನ್ ಪೋಲ್, ಮೋಹನ್ ಕುಮಾರ್ ಎಲ್, ಜನಾರ್ದನ್ ಎನ್ ಮತ್ತು ಶಯ್ಯಾ ಪಿ. ಎಂಬವರು ಒಳಗೊಂಡಿದ್ದಾರೆ.