ಮಧೂರು ಕ್ಷೇತ್ರದಲ್ಲಿ ಮಂಡಲ ಸಂಕೀರ್ತನೋತ್ಸವ ೧೪ರಿಂದ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಜನವರಿ ೧೪ರಿಂದ ೪೮ ದಿನಗಳ ಕಾಲ ಮಂಡಲ ಸಂಕೀರ್ತನೋತ್ಸವ ನಡೆಯಲಿದೆ. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ಮಧೂರು ದೇವಸ್ಥಾನ ನವೀಕರಣ ಸಮಿತಿ ಹಾಗೂ ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿರುವುದು. ಮಂಡಲ ಸಂಕೀರ್ತನೋತ್ಸವವನ್ನು ೧೪ರಂದು ಬೆಳಿಗ್ಗೆ ೧೦ ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಘೋಷಯಾತ್ರೆ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಕಾಸರ ಗೋಡು ಚಿನ್ಮಯ ಮಿಶನ್‌ನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ ಅಧ್ಯಕ್ಷತೆ ವಹಿಸುವರು. ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಪಟ್ಟೇರಿ ಕಾವುಮಠ, ಮಧೂರು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಕ್ಷೇತ್ರದ ಪವಿತ್ರಪಾಣಿ ರತನ್ ಕುಮಾರ್ ಕಾಮಡ ಗೌರವ ಉಪಸ್ಥಿತರಿರುವರು.
ಮಧೂರು ಕ್ಷೇತ್ರ ಬ್ರಹ್ಮಕಲಶೋ ತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು, ಮುಂಡಪ್ಪಳ್ಳ ಶ್ರೀ ರಾಜ ರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ, ಮಧೂರು ಕ್ಷೇತ್ರ ನವೀಕರಣ ಸಮಿತಿ ಉಫಾಧ್ಯಕ್ಷ ಡಾ| ಬಿ.ಎಸ್. ರಾವ್, ಪ್ರಧಾನ ಕಾರ್ಯದರ್ಶಿ ಜಯ ದೇವ ಖಂಡಿಗೆ, ಕಾರ್ಯದರ್ಶಿ ಮಂ ಜುನಾಥ ಕಾಮತ್, ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಮಧೂರು ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಟಿ ಮುಖ್ಯ ಅತಿಥಿಗಳಾಗಿರುವರು.