ಮಧೂರು ಕ್ಷೇತ್ರ ಜಾತ್ರಾಮಹೋತ್ಸವ ಆರಂಭ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಇಂದು ಆರಂಭಗೊಂಡಿದ್ದು, ೧೭ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇಂದು ಬೆಳಿಗ್ಗೆ ವೇದ ಪಾರಾಯಣ, ಧ್ವಜಾರೋಹಣ, ಸಹಸ್ರ ಕುಂಭಾಭಿಷೇಕ ಜರಗಿತು. ರಾತ್ರಿ ೮ಕ್ಕೆ ಉತ್ಸವ ಬಲಿ ನಡೆಯಲಿದೆ. ನಾಳೆ ಮುಂಜಾನೆ ೫ಕ್ಕೆ ದೀಪೋತ್ಸವ, ವಿಷುಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, ಬೆಳಿಗ್ಗೆ ೭.೩೦ರಿಂದ ಪಂಚವಾದ್ಯ, ರಾತ್ರಿ ೮ಕ್ಕೆ ಉತ್ಸವ ಬಲಿ, ೧೫ರಂದು ಮುಂಜಾನೆ ೫ಕ್ಕೆ ದೀಪೋತ್ಸವ, ಉತ್ಸವ ಬಲಿ, ರಾತ್ರಿ ೮ಕ್ಕೆ ನಡು ದೀಪೋತ್ಸವ, ಉತ್ಸವಬಲಿ, ಸೇವೆ ಸುತ್ತುಗಳು, ೧೬ರಂದು ಮುಂಜಾನೆ ೫ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನ ಬಲಿ, ರಾತ್ರಿ ೭ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ದೇವರ ಘೋಷಯಾತ್ರೆ ನಡೆಯಲಿದೆ. ಈ ವೇಳೆ ಕಾಸರಗೋಡು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯವರಿಂದ ತಾಲೀಮು ಪ್ರದರ್ಶನವಿರುವುದು. ೮.೩೦ಕ್ಕೆ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ೧೦ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸಿಡಿಮದ್ದು ಪ್ರದರ್ಶನ, ೧೨.೩೦ಕ್ಕೆ ಶಯನ ಕವಾಟ ಬಂಧನ, ೧೭ರಂದು ಬೆಳಿಗ್ಗೆ ೭ಕ್ಕೆ ಕವಾಟೋ ದ್ಘಾಟನೆ, ರಾತ್ರಿ ೮ಕ್ಕೆ ಉತ್ಸವಬಲಿ, ೧೦ಕ್ಕೆ ಕ್ಷೇತ್ರದ ಕೆರೆಯಲ್ಲಿ ದೇವರ ಅವಭೃತ ಸ್ನಾನ, ಪಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಲಿದೆ. ಉತ್ಸವ ದಿನಗಳಲ್ಲಿ ಪ್ರತೀ ದಿನ ಮಧ್ಯಾಹ್ನ ೧೨ಕ್ಕೆ ತುಲಾಭಾರ ಸೇವೆ, ೧೨.೩೦ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ತಾಯಂಬಕ, ದೀಪಾರಾಧನೆ ನಡೆಯಲಿದೆ.