ಮಧೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ ವಿಧಿವಶ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾ ಯಕ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ (88) ಅವರು ವಿಧಿವಶರಾದರು.  ಮಂಗಳೂರಿನಲ್ಲಿರುವ ಸ್ವ-ಗೃಹದಲ್ಲಿ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಪ್ರಮುಖ ಧಾರ್ಮಿಕ ಮುಂದಾಳು ಆಗಿದ್ದ ಇವರು ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಕುಕ್ಕಂಗೂಡ್ಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲೂ ಸಕ್ರಿಯರಾಗಿದ್ದರು.  ಬೇಳ ಕುಮಾರ ಮಂಗಲ ಸಮೀಪದ ಕೋಡಿಂ ಗಾರು ಮನೆತನದ ಡಾ| ಕೆ.ಸಿ. ಆಳ್ವರ ಪುತ್ರನಾದ  ಉಳಿಪ್ಪಾಡಿ ತಾರಾನಾಥ ಆಳ್ವರು ಯು.ಟಿ. ಆಳ್ವರೆಂದೇ ಪ್ರಸಿದ್ಧರಾಗಿದ್ದರು. ಇಂಡ್ಯನ್ ಫಾರೆಸ್ಟ್ ಸರ್ವೀಸ್‌ಗಳಿಸಿದ್ದ ಇವರು ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

  ಮೃತರು ಪತ್ನಿ ಶಕುಂತಳಾ ಆಳ್ವ, ಮಕ್ಕಳಾದ  ಶಾರದಾ ಮಣಿ, ರಾಣಿ ಸೇಮಿತ, ಶ್ರೀದೇವಿ, ಶಿಬಾನಿ, ಕುಮಾರ್ ಚಿಕ್ಕಪ್ಪ ಆಳ್ವ,  ಸಹೋದರ- ಸಹೋದರಿಯರಾದ ಗಣೇಶ್ ಆನಂದ ಆಳ್ವ, ಡಾ| ಪ್ರಕಾಶ್ ಚಂದ್ರ ಆಳ್ವ, ಮುಕ್ತಲತ, ವಿಜಯಲಕ್ಷ್ಮಿ, ಸೊಸೆ, ಅಳಿಯಂದಿರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇನ್ನೋ ರ್ವೆ ಸಹೋದರಿ ಸೋಮ ಲತ ಭಂಡಾರಿ ಹಾಗೂ ಸಹೋದರ ಡಾ| ಬಾಲಕೃಷ್ಣ ಆಳ್ವ ಈ ಹಿಂದೆ ನಿಧನ ರಾಗಿದ್ದಾರೆ.

You cannot copy contents of this page