ಪಿಗ್ಮಿ ಸಂಗ್ರಾಹಕ ನಿಧನ

ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಪಿಗ್ಮಿ ಸಂಗ್ರಾಹಕ, ಮಂಜೇಶ್ವರ ನಿವಾಸಿ ಶಾಂತರಾಮ.ಜಿ (೬೨) ನಿಧನ ಹೊಂದಿದರು. ಇವರು ಬ್ಯಾಂಕ್‌ನ ಪ್ರಧಾನ ಶಾಖೆಯಲ್ಲಿ ಹಲವು ವರ್ಷ ಗಳಿಂದ ಪಿಗ್ಮಿ ಸಂಗ್ರಾಹಕರಾಗಿ ದ್ದರು. ನಿನ್ನೆ ಸಂಜೆ ಇವರಿಗೆ ಮನೆ ಯಲ್ಲಿ ಹೃದಯÁಘಾತ ಉಂಟಾ ಗಿದ್ದು, ಕೂಡಲೇ ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಯಿತಾದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಶಾರದಾ, ಮಕ್ಕಳಾದ ಪ್ರಣನ್ಯ, ಪ್ರಣಮ್ಯ, ಸಹೋದರಿಯರಾದ ಸಾವಿತ್ರಿ, ಸತ್ಯಾವತಿ, ಚಂದ್ರಾವತಿ ಹಾಗೂ ಅಪಾರ ಬಂಧು-ಬಳಗ ವನ್ನು ಅಗಲಿದ್ದಾರೆ. ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಎಸ್. ರಾಮಚಂದ್ರ, ಕಾಞಂಗಾಡ್ ಶಾಸಕ ಗೋವಿಂದನ್ ಪಳ್ಳಿಕಾಪಿಲ್, ಸಿಪಿಐ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಸಿಪಿಎಂ ನೇತಾರ ಕೆ.ಆರ್ ಜಯಾನಂದ ಮೊದಲಾದವರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿಧನಕ್ಕೆ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ, ಬ್ಯಾಂಕ್ ಸಿಬ್ಬಂದಿ ವರ್ಗದ ವರು, ಸಿಪಿಐ ಮಂಜೇಶ್ವರ ಲೋಕಲ್ ಸಮಿತಿ, ಕೆ.ಸಿ.ಇ.ಸಿ ಮಂಜೇಶ್ವರ ಯೂನಿಟ್, ಎ.ಐ.ವೈ.ಎಫ್ ಮಂಜೇಶ್ವರ ವಲಯ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

You cannot copy contents of this page