ಮಧೂರು ದೇಗುಲ ಬ್ರಹ್ಮಕಲಶೋತ್ಸವ ಪದಾಧಿಕಾರಿಗಳಿಂದ ರಾಘವೇಶ್ವರ ಶ್ರೀ ಭೇಟಿ
ಮಧೂರು: ಕ್ಷೇತ್ರದಲ್ಲಿ ಮಾರ್ಚ್ ೨೭ರಿಂದ ಜರಗಲಿರುವ ಬ್ರಹ್ಮಕಲಶೋ ತ್ಸವ, ಮೂಡಪ್ಪ ಸೇವೆಯ ಪೂರ್ವ ಭಾವಿಯಾಗಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಕಿಳಿಂಗಾರು ಸಾಯಿ ಮಂದಿರದಲ್ಲಿ ಭೇಟಿಯಾಗಿ ಸಮಿತಿ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕುಳೂರು ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದರು.