ಮಧೂರು ಪಂಚಾಯತ್ ಕಚೇರಿಗೆ ಯುಡಿಎಫ್ ಮಾರ್ಚ್ ನಾಳೆ
ಮಧೂರು: ಮಧೂರು ಪಂಚಾ ಯತ್ನ ಆಡಳಿತ ಸಮಿತಿ ವಿರುದ್ಧ ಮೂಡಿ ಬಂದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು, ಅಧ್ಯಕ್ಷರು ರಾಜೀನಾಮೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ನಾಳೆ ಬೆಳಿಗ್ಗೆ 10 ಗಂಟೆಗೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸುವುದಾಗಿ ಯುಡಿಎಫ್ ಪಂಚಾಯತ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಆಡಳಿತ ಸಮಿತಿ ಜ್ಯಾರಿಗೊಳಿಸಿದ ಹಲವಾರು ಯೋಜನೆಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ ಎಂದು ಪದಾಧಿಕಾರಿಗಳಾದ ಹಾರಿಸ್ ಚೂರಿ, ಪಿ.ಪಿ. ಸುಮಿತ್ರನ್, ಎಂ. ರಾಜೀವನ್ ನಂಬ್ಯಾರ್, ಮಜೀದ್ ಪಟ್ಲ, ಜಿಲ್ಲಾ ಪಂಚಾಯತ್ ಸದಸ್ಯೆ ಜಾಸ್ಮೀನ್ ಕಬೀರ್ ಚೆರ್ಕಳ, ಬ್ಲೋಕ್ ಪಂ. ಸದಸ್ಯೆ ಜಮೀಲ ಅಹಮ್ಮದ್, ಪಂ. ಸದಸ್ಯ ರಾದ ಹಬೀಬ್ ಚೆಟ್ಟಂಗುಳಿ, ಅನೀಫ ಅರಂತೋಡು ಆರೋಪಿಸಿದರು. ವಿಜಿಲೆನ್ಸ್ಗೆ ದೂರು ನೀಡಿದ ಆಧಾರದಲ್ಲಿ ತನಿಖೆ ನಡೆಸಲಾಯಿತಲ್ಲದೆ ಯಾವುದೇ ರೀತಿಯ ಕ್ರಮವೂ ಇದುವರೆಗೆ ಉಂಟಾಗಿಲ್ಲವೆಂದು ಅವರು ಆರೋಪಿಸಿದರು. ಐಕ್ಯರಂಗದ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಮಾರ್ಚ್ ಉದ್ಘಾಟಿಸುವರು.