ಮಧೂರು ಬ್ರಹ್ಮಕಲಶೋತ್ಸವ: ಕಾಸರಗೋಡು ನಗರದಲ್ಲಿ ಅಲಂಕಾರ ಬಗ್ಗೆ ವಿಶೇಷ ಸಭೆ
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಕಾರ್ಯ ಕ್ರಮದ ಯಶಸ್ಸಿಗೆ ಕಾಸರಗೋಡು ನಗರ ಅಲಂಕಾರ, ಸ್ವಾಗತದ್ವಾರ, ವಿದ್ಯುತ್ ಅಲಂಕಾರ ತಯಾರಿಗೆ ನಗರದ ಎಲ್ಲಾ ಸಂಘ ಸಂಸ್ಥೆ ಹಾಗೂ ಆಟೋ, ಟ್ಯಾಕ್ಸಿ ಸ್ಟಾಂಡ್ ಇದರ ಪದಾಧಿಕಾರಿಗಳ ವಿಶೇಷ ಸಭೆ ಕರಂದಕ್ಕಾಡು ಶಿವಾಜಿ ನಗರದ ವೀರ ಹನುಮಾನ್ ಮಂದಿರ ದಲ್ಲಿ ಮಂದಿರದ ಅಧ್ಯಕ್ಷ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. 25ಕ್ಕಿಂತಲೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೊಸ ಬಸ್ ನಿಲ್ದಾಣ, ಅಡ್ಕತ್‌ಬೈಲು, ತಾಲೂಕು ಕಚೇರಿ ಭಾಗ, ಮಧೂರು ರಸ್ತೆಯಲ್ಲಿ ಅಲಂಕಾರ ಮಾಡಲು ತೀರ್ಮಾನಿಸಲಾಯಿತು. ಬ್ರಹ್ಮ ಕಲಶೋತ್ಸವ ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಸದಸ್ಯ ಕೇಶವ, ವೀರ ಹನುಮಾನ್ ಮಂದಿರದ ರವಿ ಕರಂದಕ್ಕಾಡ್, ಕರಂದಕ್ಕಾಡ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಆರ್, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು ಭಾಗವಹಿಸಿದರು.