ಮಧೂರು ಬ್ರಹ್ಮಕಲಶೋತ್ಸವ: ವಾಹನ ನಿಲುಗಡೆಗೆ ಮೂರು ಕಡೆ ವ್ಯವಸ್ಥೆ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳನ್ನು ನಿಲುಗಡೆಗೊಳಿಸಲು ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಕೊಲ್ಯ ಏರಿಕ್ಕಳ ಬಯಲು, ಚೇನಕ್ಕೋಡು ಬಯಲು, ಪರಕ್ಕಿಲದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಾಸರಗೋಡು ಭಾಗದಿಂದ ಬರುವವರು ಮಧೂರು ಬಯಲಿನಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬೇಕು.
ಪುತ್ತೂರು, ವಿಟ್ಲ, ಬದಿಯಡ್ಕ, ಪೆರ್ಲ, ನೀರ್ಚಾಲು ಭಾಗದಿಂದ ಬರುವವರು ಕೊಲ್ಯ ಏರಿಕ್ಕಳ ಬಯಲಿನಲ್ಲಿ, ಮಂಗಳೂರು, ಸುಳ್ಯ, ಕಾಞಂಗಾಡ್ ಮೊದಲಾದೆಡೆಗಳಿಂದ ಬರುವವರು ಚೇನಕ್ಕೋಡ್‌ನಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿದೆ.