ಮಧ್ಯವಯಸ್ಕ ಮನೆಯೊಳಗೆ ನೇಣುಬಿಗಿದು ಸಾವು
ಕಾಸರಗೋಡು: ಮಧ್ಯವಯ ಸ್ಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ.
ಬೇಡಗಂ ವೇಳಾಯಿಯ ಎಂ. ಅಶೋಕನ್ (58) ಮೃತ ವ್ಯಕ್ತಿ. ನಿನ್ನೆ ರಾತ್ರಿ 7 ಗಂಟೆ ವೇಳೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕೆಳಗಿಳಿಸಿ ಬೇಡಡ್ಕ ತಾಲೂಕು ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ದಿ| ಕೋಮನ್ ನಾಯರ್-ಅಮ್ಮಾಳು ಅಮ್ಮ ದಂಪತಿಯ ಪುತ್ರನಾದ ಮೃತರ ಪತ್ನಿ ಇಂದಿರ ಈ ಹಿಂದೆ ನಿಧನಹೊಂದಿದ್ದಾರೆ.
ಮೃತರು ಮಕ್ಕಳಾದ ಅಶ್ವಿನ್, ಆದಿರ, ಸಹೋದರ-ಸಹೋದರಿಯರಾದ ಪವಿತ್ರನ್, ಕಾರ್ತ್ಯಾಯಿನಿ, ರತ್ನಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.