ಮನೆಗೆ ನುಗ್ಗಿ ಆಕ್ರಮಣ : ಇಬ್ಬರು ಯುವಕರು ಇರಿತಕ್ಕೆ ಬಲಿ
ತೃಶೂರು: ಇಬ್ಬರು ಯುವಕರು ಇರಿತಕ್ಕೀಡಾಗಿ ಸಾವಿಗೀಡಾದ ಘಟನೆ ತೃಶೂರು ಬಳಿ ಕೊಡಕ್ಕರ ದಲ್ಲಿ ನಡೆದಿದೆ. ಕಲ್ಲಿಂಗಾಪುರಂ ವೀಟಿಲ್ ಸುಜಿತ್ (29), ಮಟತ್ತಿಲ್ ಪರಂಬ್‌ನ ಅಭಿಷೇಕ್ (28) ಎಂಬಿವರು ಸಾವಿಗೀಡಾದ ಯುವಕರಾಗಿದ್ದಾರೆ. ಅಭಿಷೇಕ್ ಹಾಗೂ ಮತ್ತಿಬ್ಬರು ಸೇರಿ ಸುಜಿತ್‌ನ ಮನೆಗೆ ನುಗ್ಗಿ ಆಕ್ರಮಣವೆಸಗಿರು ವುದಾಗಿ ಹೇಳಲಾಗುತ್ತಿದೆ. ಈ ವೇಳೆ ಇರಿತದಿಂದ ಗಾಯಗೊಂಡ ಸುಜಿತ್ ಪ್ರತ್ಯಾಕ್ರಮಣ ನಡೆಸಿದಾಗ ಅಭಿಷೇಕ್‌ಗೆ ಕೂಡಾ ಇರಿತ ಉಂ ಟಾಗಿದೆ. ಗಾಯಗೊಂಡ ಅವರಿ ಬ್ಬರನ್ನೂ ಇತರರು ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ನಿನ್ನೆ ರಾತ್ರಿ 11.30ರ ವೇಳೆ ಘಟನೆ ನಡೆದಿದೆ. ಹರೀಶ್, ವಿವೇಕ್, ಅಭಿಷೇಕ್ ಎಂಬಿವರು ಸುಜಿತ್‌ನ ಮನೆಗೆ ನುಗ್ಗಿ ಆಕ್ರಮಣ ನಡೆಸಿರು ವುದಾಗಿ ದೂರಲಾಗಿದೆ. ವಿವೇಕ್‌ಗೆ ನಾಲ್ಕು ವರ್ಷಗಳ ಹಿಂದೆ ಕ್ರಿಸ್ಮಸ್ ದಿನದಂದು ರಾತ್ರಿ ಸುಜಿತ್ ಇರಿ ದಿದ್ದನೆನ್ನಲಾಗಿದೆ. ಇದರ ಪ್ರತಿಕಾರ ವಾಗಿ ನಿನ್ನೆ ರಾತ್ರಿ ಈ ಕೃತ್ಯವೆಸ ಗಿರುವುದಾಗಿ ಸಂಶಯಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.