ಮನೆಗೆ ನುಗ್ಗಿ ಹಲ್ಲೆ: ಓರ್ವನ ವಿರುದ್ಧ ಜಾಮೀನು ರಹಿತ ಕೇಸು
ಕುಂಬಳೆ: ಮನೆಗೆ ನುಗ್ಗಿ ಹಲ್ಲೆಗೈದ ಆರೋಪದಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂಡಿ ದ್ದಾರೆ. ಉಳುವಾರು ಬಾಯಿಕಟ್ಟೆಯ ಅಬ್ದುಲ್ಲ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಉಳುವಾರು ನಿವಾಸಿ ಮೊಹಮ್ಮದ್ ಕುಂಞಿಯ ದೂರಿನಂತೆ ಈ ಕೇಸು ದಾಖಲಿಸಲಾ ಗಿದೆ. ಮೊಹಮ್ಮದ್ ಕುಂಞಿ (೩೮), ಪತ್ನಿ ಹೈರುನ್ನಿಸ (೩೨), ಮಕ್ಕಳಾದ ಮುಬೀನ (೮), ಮುನವರ್ (೧೧), ಮೊಹಮ್ಮದ್ ಕುಂಞಿಯ ತಾಯಿ ಆಯಿಶಾಬಿ ಎಂಬವರಿಗೆ ಅಬ್ದುಲ್ಲ ಹಲ್ಲೆಗೈದಿದ್ದಾನೆಂದು ದೂರಲಾಗಿದೆ.