ಕಾಸರಗೋಡು: ಮನೆಯಿಂದ ಆರೂವರೆ ಪವನ್ ಚಿನ್ನ ಕಳವುಗೈದ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀ ಡಲಾಗಿದೆ. ಪನಯಾಲ್ ಕುದಿರ ಕ್ಕೋಡ್ ಕಾಲಿಚ್ಚಾರಂ ಮಣಿಕಾಯದ ಕೆ. ನಾರಾಯಣರ ಮನೆಯಲ್ಲಿ ಕಳವು ನಡೆದಿದೆ. ಮನೆ ಕಪಾಟಿನೊಳಗೆ ಇರಿಸಲಾಗಿದ್ದ ಚಿನ್ನವನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.