ಮನೆಯೊಡೆಯ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಮನೆಯೊಡೆ ಯನ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾ ಯಿತು. ಮಾವಿನಕಟ್ಟೆ ಕುಂಞಡ್ಕ ನಿವಾಸಿ ಇಸ್ಮಾಯಿಲ್ (೫೧) ಎಂಬವರು ನಿನ್ನೆ ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದರು. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಸಾವಿನ ಬಗ್ಗೆ ಉಂಟಾಗಬಹುದಾದ ಸಂಶಯ ನಿವಾರಣೆಗಾಗಿ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆ ನಡೆಸಲು ಪರಿಯಾರಂಗೆ ಕೊಂಡೊಯ್ಯಲಾ ಯಿತು. ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದು ಸಾವಿಗೀಡಾಗಿರು ವುದಾಗಿ ದೃಢೀಕರಿಸಲಾಗಿದೆ.
ಇಸ್ಮಾಯಿಲ್‌ರ ಪುತ್ರ ಎರ್ನಾಕುಳಂ ನಲ್ಲಿದ್ದಾರೆ. ಪತ್ನಿ ಸಹಿತ ಕುಟುಂಬ ಸದಸ್ಯರು ಮಾತ್ರ ಮನೆಯಲ್ಲಿದ್ದರೆಂದು ಹೇಳ ಲಾಗುತ್ತಿದೆ. ಇಸ್ಮಾಯಿಲ್ ಹಸುಗಳ ಹಾಲು ಹಿಂಡುವ ಕೆಲಸ ನಿರ್ವಹಿಸುತ್ತಿದ್ದರು. ನಿತ್ಯ ತೆರಳುವ ಸ್ಥಳಕ್ಕೆ ನಿನ್ನೆ ಮುಂಜಾನೆ ಹಾಲು ಹಿಂಡಲು ತಲುಪದಿರುವುದ ರಿಂದ ಹುಡುಕಿದಾಗ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕರ್ನಾಟಕದ ಉಪ್ಪಿನಂಗಡಿ ನಿವಾಸಿಯಾದ ಇಸ್ಮಾಯಿಲ್ ಹಲವು ವರ್ಷಗಳಿಂದ ಮಾವಿನಕಟ್ಟೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಸುಹರಾ, ಮಕ್ಕಳಾದ ಸಾಬಿನ, ಸಾಬಿತ್, ಸಾಬಿರ, ಅಳಿಯ ಸಮೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.