ಮರದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ವೃದ್ಧ ಮೃತ್ಯು
ಮೀಯಪದವು: ಮಾವಿನಕಾಯಿ ಕೊಯ್ಯುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ಧ ಮೃತಪಟ್ಟರು. ಮೀಯಪದವು ಬುಡ್ರಿಯ ನಿವಾಸಿ ಕೃಷ್ಣ ಮೂಲ್ಯ (62) ನಿನ್ನೆ ಸಂಜೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಈ ತಿಂಗಳ 16ರಂದು ಸಂಜೆ ಮನೆ ಹಿತ್ತಿಲಲ್ಲಿರುವ ಮರದಿಂದ ಮಾವಿನ ಕಾಯಿ ಕೊಯ್ಯುತ್ತಿದ್ದಾಗ ಬಿದ್ದಿದ್ದರು. ಈ ವೇಳೆ ಕುತ್ತಿಗೆ, ತಲೆಗೆ ಗಾಯ ಉಂಟಾಗಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಸಂಜೆ ಮೃತಪಟ್ಟರು. ಮೃತರು ಪತ್ನಿ ಕಮಲ, ಮಕ್ಕಳಾದ ಶಿವಾನಂದ, ಶಿಲ್ಪಾ, ಅಳಿಯ ಸೀತಾರಾಮ, ಸಹೋದರ ತ್ಯಾಂಪಮೂಲ್ಯ, ಸೋದರಿಯರಾದ ಪದ್ಮಾವತಿ, ಕೃಷ್ಣಾವತಿ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.