ಮರದಿಂದ ಬಿದ್ದು ಯುವಕ ಮೃತ್ಯು
ಕಾಸರಗೋಡು: ಮರದಿಂದ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಚಿಟ್ಟಾರಿಕಲ್ ನಿವಾಸಿ ಜೋಯ್ಸ್ ಜೋಸೆಫ್ (48) ಮೃತ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮಾಲೋಮ್ ಕಾಟಂಕವಲ ಎಂಬಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಮರ ಕಡಿಯುತ್ತಿದ್ದಾಗ ಇವರು ಕೆಳಕ್ಕೆ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಜೋಸೆಫ್ ಎಂಬವರ ಪುತ್ರನಾದ ಮೃತರು ಪತ್ನಿ ವಿಬಿ, ಮಕ್ಕಳಾದ ಅಲ್ಬರ್ಟ್, ಆಂಡ್ರಿಯ ಹಾಗೂ ಇಬ್ಬರು ಸಹೋದರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.