ಮರ ಕುಸಿದು ಬಿದ್ದು 2 ಕುಟುಂಬಗಳ ಮನೆ ಅಪಾಯದಂಚಿನಲ್ಲಿ
ಉಪ್ಪಳ: ಗಾಳಿ ಮಳೆಗೆ ಬೃಹತ್ ಮರ ಕುಸಿದು ಬಿದ್ದಾಗ ಸಮೀಪದಿಂದ ಮಣ್ಣು ಕುಸಿದು ಹೋಗಿದ್ದು, ಪರಿಸರದ ಎರಡು ಮನೆಗಳಿಗೆ ಭೀತಿ ಸೃಷ್ಟಿಯಾಗಿದೆ. ಪೈವಳಿಕೆ ಪಂಚಾಯತ್ ಕಯ್ಯಾರು ವಿಲ್ಲೇಜು ವ್ಯಾಪ್ತಿಯ ಜೋಡುಕಲ್ಲು ಶಿಶು ಮಂದಿರದ ಸಮೀಪ ರಸ್ತೆಗಿಂತ ಎತ್ತರವಾಗಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ಶಿವಪ್ರಸಾದ್ ಜೋಗಿ, ಮೀನಾಕ್ಷಿ ಜೋಗಿ ಎಂಬವರ ಮನೆ ಈಗ ಕುಸಿದು ಬೀಳುವ ಹಂತದಲ್ಲಿದೆ. ಭಾನುವಾರ ಸಂಜೆ ಸುರಿದ ಮಳೆ ಹಾಗೂ ಗಾಳಿಗೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಬುಡಸಮೇತ ಕುಸಿದಿದೆ. ಇದರ ಜೊತೆಗೆ ಮನೆ ಸಮೀಪದ ಮಣ್ಣು ಕೂಡ ಕುಸಿದಿದ್ದು, ಮನೆಗಳು ಕುಸಿಯುವ ಭೀತಿಯಲ್ಲಿದೆ. ಇದರಿಂದ ಕುಟುಂಬ ಆತಂಕಗೊಂಡಿದೆ. ಸ್ಥಳಕ್ಕೆ ವಾರ್ಡ್ ಪ್ರತಿನಿಧಿ, ಗ್ರಾಮಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.