ಮರ ಮುರಿದು ಬಿದ್ದು ಮನೆಗೆ ಹಾನಿ
ಪೈವಳಿಕೆ: ಭಾರೀ ಮಳೆಗೆ ಗುಡ್ಡೆಯ ಮರವೊಂದು ಮುರಿದು ಬಿದ್ದು ಮನೆ ಹಾನಿಗೊಂಡಿದೆ. ಪೈವಳಿಕೆ ಪಂಚಾಯತ್ನ 19ನೇ ವಾರ್ಡ್ಗೊಳಪಟ್ಟ ಕಳಾಯಿಪಾಡಿ ಎಂಬಲ್ಲಿ ಅಬ್ದುಲ್ ಕರೀಂ ಎಂಬವರ ಹೆಂಚುಹಾಸಿದ ಮನೆಗೆ ಮರ ಬಿದ್ದು ಹಾನಿವುಂಟಾಗಿದೆ. ಮನೆ ಹಿಂಬದಿಯಲ್ಲಿದ್ದ ಗಾಳಿಮರ ನಿನ್ನೆ ಸಂಜೆ ಬೀಸಿದ ಗಾಳಿಗೆ ಮುರಿದು ಮನೆ ಮೇಲೆ ಬಿದ್ದಿದೆ. ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ಶ್ರೀನಿವಾಸ ಭಂಡಾರಿ, ವಿಲ್ಲೇಜ್ ಅಫೀಸರ್ ಮೊದೀನ್ಕುಂಞಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ವೇಳೆ ನಿನ್ನೆ ಸಂಜೆ ಸೋಂಕಾಲು ಕೊಡಂಗೆ ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಅಲ್ಪ ಹೊತ್ತು ಈ ರಸ್ತೆಯಲ್ಲಿ ಸಂಚಾರ ಮೊಟಕುಗೊಂಡಿತ್ತು. ಬಳಿಕ ಉಪ್ಪಳದ ಅಗ್ನಿಶಾಮಕ ದಳ ತಲುಪಿ ಮರವನ್ನು ಕಡಿದು ತೆರವುಗೊಳಿಸಿದೆ.