ಮಲಬಾರ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕನ ಮೊಬೈಲ್ ಫೋನ್ ಕಳವು: ಕುಖ್ಯಾತ ಆರೋಪಿ ಸೆರೆ
ಕಣ್ಣೂರು: ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ ಹಾಗೂ ನಗದು ಕಳವುಗೈಯ್ಯುವ ಕುಖ್ಯಾತನನ್ನು ಸೆರೆ ಹಿಡಿಯಲಾಗಿದೆ. ಬಿಹಾರ್ ನಿವಾಸಿ ಮುಹಮ್ಮದ್ ಅಜರುದ್ದೀನ್ (೩೦) ಎಂಬಾತನನ್ನು ರೈಲ್ವೇ ಪೊಲೀಸರು ತಿರೂರಿನಲ್ಲಿ ಸೆರೆ ಹಿಡಿದಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ಮಲ ಬಾರ್ ಎಕ್ಸ್‌ಪ್ರೆಸ್‌ನ ಪ್ರಯಾಣಿ ಕನಾದ ಅರ್ಜುನ್ ಎಂಬವರ ಜೇಬಿನಿಂದ ಮೊಬೈಲ್ ಫೋನ್ ಕಳವುಗೈದ ಪ್ರಕರಣದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಈತನ ಬ್ಯಾಗ್ ಪರಿಶೀಲಿಸಿದಾಗ ಕಳವುಗೈದದ್ದೆಂದು ಶಂಕಿಸುವ ಐಫೋನ್ ಸಹಿತ ನಾಲ್ಕು ಫೋನ್‌ಗಳು ಹಾಗೂ ಚಾರ್ಜರ್‌ಗಳನ್ನು ಪತ್ತೆಹಚ್ಚಲಾಗಿದೆ. ಈತನನ್ನು ಕಲ್ಲಿಕೋಟೆ ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.