ಮಳೆಗಾಲಪೂರ್ವ ಶುಚೀಕರಣ ಭರದಲ್ಲೂ ನಗರದಲ್ಲಿ ತ್ಯಾಜ್ಯ ರಾಶಿ
ಕಾಸರಗೋಡು: ಜಿಲ್ಲೆಯ ವಿವಿಧ ಕಡೆಗಳಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆಗೆ ಪರಿಹಾರ ಉಂಟಾಗದಿರುವಂತೆ ನಗರದ ಬ್ಯಾಂಕ್ ರಸ್ತೆಯ ಪೊಲೀಸ್ ಠಾಣೆಯ ಸಮೀಪವೇ ಕಾಲು ದಾರಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಿರುವುದು ಕಂಡು ಬರುತ್ತಿದೆ. ಗೋಣಿ ಚೀಲದಲ್ಲಿ ತುಂಬಿಸಿ ತಂದು ತ್ಯಾಜ್ಯವನ್ನು ಇಲ್ಲಿ ತಂದು ಹಾಕಲಾಗಿದೆ. ಮಳೆ ಕೆಲವೇ ದಿನಗಳಲ್ಲಿ ಸುರಿಯುವ ನಿರೀಕ್ಷೆ ಇದ್ದು, ಮಳೆ ಸುರಿದರೆ ತ್ಯಾಜ್ಯಗಳೆಲ್ಲಾ ಕೊಳೆತು ದುರ್ವಾಸನೆ, ಸೊಳ್ಳೆ ಉತ್ಪಾದನೆ, ವಿವಿಧ ರೋಗ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಳೆಗಾಲ ಪೂರ್ವ ಶುಚೀಕರಣವನ್ನು ಉಪಯುಕ್ತ ರೀತಿಯಲ್ಲಿ ನಡೆಸಬೇಕಾಗಿದೆ.