ಮಳೆಗಾಲಪೂರ್ವ ಶುಚೀಕರಣ ಮೇ 5ರಂದು
ಕಾಸರಗೋಡು: ಜಿಲ್ಲೆಯಲ್ಲಿ ಮಳೆಗಾಲ ಪೂರ್ವ ಶುಚೀಕರಣ ದಂಗವಾಗಿ ಮೇ ೫ರಂದು ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಅಂಡರ್ಪಾಸ್, ತೋಡುಗಳು, ಕಾಲುವೆಗಳು ಸಹಿತ ಸಾರ್ವಜನಿಕ ಸ್ಥಳಗಳನ್ನು ಶುಚೀಕರಿಸ ಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು. ಸ್ಥಳೀಯಾಡಳಿತ ಸಂಸ್ಥೆಗಳ ಮೇಲ್ನೋಟದಲ್ಲಿ ಹಸಿರು ಕ್ರಿಯಾಸೇನೆ, ಉದ್ಯೋಗ ಖಾತರಿ ಕಾರ್ಮಿಕರು, ಎನ್ಎಸ್ಎಸ್, ಎನ್ಸಿಸಿ, ಯುವಜನರು, ಸಾರ್ವ ಜನಿಕರು ಎಂಬಿವರ ನೇತೃತ್ವದಲ್ಲಿ ಶುಚೀಕರಣ ಆಯೋಜಿಸ ಲಾಗುವುದು. ಬಳಿಕದ ದಿನಗಳಲ್ಲಿ ಮನೆಗಳಲ್ಲೂ ಡ್ರೈಡೇ ಆಚರಿಸಲಾಗುವುದು. ಶಾಲೆಗಳಲ್ಲಿ ಮಾರ್ಚ್ ೩೧ರಂದು ಮೊದಲ ಹಂತದ ಶುಚೀಕರಣ ಚಟುವಟಿಕೆಗ ಳನ್ನು ನಡೆಸಲಾಗಿತ್ತು. ಶಾಲೆ ತೆರೆಯುವ ಒಂದು ವಾರದ ಮುಂಚಿತ ಇನ್ನೊಮ್ಮೆ ಶುಚೀಕರಿಸ ಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ಟ್ರೀ ಕಮಿಟಿಗಳು ಸಭೆ ಸೇರಿ ಅಪಾಯಭೀತಿ ಉಂಟುಮಾಡುವ ಮರಗಳ ವಿಷಯ ದಲ್ಲಿ ತೀರ್ಮಾನ ಕೈಗೊಳ್ಳುವರೆಂದು ಜಿಲ್ಲಾಧಿಕಾರಿ ನುಡಿದರು.