ಮಹಿಳೆಯರಿಗೆ, ಮಕ್ಕಳಿಗೆ ಮಾತ್ರವಾಗಿ ಪ್ರತ್ಯೇಕ ಘಟಕ, ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉದ್ಘಾಟನೆ

ಕಣ್ಣೂರು: ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಟಿಟಲ್‌ನಲ್ಲಿ ಮಹಿಳೆಯರಿಗೂ, ಮಕ್ಕಳಿಗೂ ಹೆಚ್ಚು ಸೌಕರ್ಯಪ್ರದವಾದ ಹಾಗೂ ಸಮಗ್ರ ಪರಿಚರಣೆ ಖಚಿತಪಡಿಸುವ ಹೊಸ ಸೆಂಟರ್ ಫಾರ್ ವುಮೆನ್ ಆಂಡ್ ಚೈಲ್ಡ್ ಅತ್ಯಾಧುನಿಕ ಪಿಡಿಯಾಟ್ರಿಕ್ ಐಸಿಯು ಉದ್ಘಾಟಿಸಲಾಯಿತು. ತಾಯಿಗೆ ಹಾಗೂ ಮಗುವಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಚಿಕಿತ್ಸೆ ಸೌಕರ್ಯ ಲಭ್ಯಗೊಳಿಸುವ ಈ ಹೊಸ ಕ್ಲಸ್ಟರ್ ವ್ಯವಸ್ಥೆಯ ಆಸ್ಪತ್ರೆಯ ಸೇವಾ ರಂಗದಲ್ಲಿ ನೂತನ ಅಧ್ಯಯವೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಕೇಂದ್ರದಲ್ಲಿ ಒಬ್‌ಸ್ಟೆಸ್ಟ್ರಿಕ್ಸ್ ಆಂಡ್ ಗೈನೋಕಾಲಜಿ, ನೀಯೋ ನೆಟಾಲೋಜಿ ಪಿಡಿಯಾಟ್ರಿಕ್ಸ್, ಪಿಡಿಯಾಡ್ರಿಕ್ ಕ್ರಿಟಿಕಲ್ ಕೇರ್ ಎಂಬೀ ವಿಭಾಗಗಳು ಸಂಯೋಜಿಸಿ ಕಾರ್ಯಾಚರಿಸುವುದರಿಂದಾಗಿ ರೋಗಿಗಳಿಗೆ ವಿವಿಧ ಡೆಲಿವರಿ ಹಾಗೂ ಶಿಶು ಪರಿಚರಣೆ ಅಗತ್ಯಗಳಿಗೆ ಆಸ್ಪತ್ರೆಯ ಇತರ ವಿಭಾಗಗಳಿಗೆ ಹೋಗಬೇಕಾದ ಸನ್ನಿವೇಶವಿಲ್ಲದಾಗುತ್ತದೆ.

ಮಕ್ಕಳ ಮಾನಸಿಕ ಆಶ್ವಾಸ, ಚಿಕಿತ್ಸಾ ಭದ್ರತೆ ಮುಂದಿಟ್ಟುಕೊಂಡು ಅತ್ಯಾಧುನಿಕ ಚಿಕಿತ್ಸಾ ಸಂವಿಧಾನಗಳೊಂದಿಗೆ ಸಜ್ಜೀಕರಿಸಿರುವುದಾಗಿ ಉದ್ಘಾಟನಾ ಭಾಷಣದಲ್ಲಿ ಬೇಬಿ ಮೆಮೋರಿಯಲ್ ಆಸ್ಪತ್ರೆಯ ನೋರ್ತ್ ಕೇರಳ ಕ್ಲಸ್ಟರ್ ಸಿಇಒ ನಿರೂಪ್ ಮುಂಡಯಾಡನ್ ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್‌ಐಸಿಯುನಲ್ಲಿ 20 ದಿನದ ತೀವ್ರ ಚಿಕಿತ್ಸೆ ಬಳಿಕ ಡಿಸ್ಚಾರ್ಚ್‌ಯಾದ ಮಗುವಿನ ತಾಯಿ ತನ್ನ ಅನುಭವವನ್ನು ಹಂಚಿಕೊಂಡರು. ಮೆಡಿಕಲ್ ಅಡ್ವೈಸರ್ ಡಾ| ಮುಹಮ್ಮದ್ ಅಬ್ದುಲ್ ನಾಸರ್ ವಿ.ಕೆ., ಡಾ| ಸೋಯಾ ಗೋಪಕುಮಾರ್, ಡಾ| ಗೀತಾ ಮೇಕೋತ್, ಡಾ| ಗೋಪಿನಾಥನ್, ಡಾ| ಎಂ. ಶ್ರುತಿ ಎಂ. ಕುಮಾರ್, ಡಾ| ಪ್ರಸಾದ್ ಕುಮಾರ್, ಡಾ| ಮುಹಮ್ಮದ್ ಜಾವಾದ್, ಡಾ| ವಿ. ಸುಹಾಸ್‌ದಾಸ್, ಡಾ| ರಿನಿ ಪೋಲ್, ಡಾ| ಅಫ್ಸಿನಾ ಜಾವೇದ್, ಡಾ| ಅಂಜನಾ ಭಾಗವಹಿಸಿದರು.

RELATED NEWS

You cannot copy contents of this page