ಮಹಿಳಾ ಆಯೋಗದ ಅದಾಲತ್‌ನಲ್ಲಿ 7 ದೂರುಗಳಿಗೆ ಪರಿಹಾರ

ಕಾಸರಗೋಡು: ಆರೋಗ್ಯಕರವಾದ ಗೃಹ ವಾತಾವರಣವನ್ನು ಖಚಿತಪಡಿಸಲು ವಾರ್ಡ್ ಮಟ್ಟದ ತಿಳುವಳಿಕೆಯನ್ನು ಬಲಪಡಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನ್ಯಾಯವಾದಿ ಪಿ. ಸತೀದೇವಿ ನುಡಿ ದರು. ಜಿಲ್ಲಾಧಿಕಾರಿ ಕಚೇರಿಯ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಸಿದ ಅದಾಲತ್‌ನ ಬಳಿಕ ಅವರು ಮಾತ ನಾಡುತ್ತಿದ್ದರು. ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ನಡೆಸಲಾಗುತ್ತಿರುವ ಅದಾಲತ್ ಗಳಲ್ಲಿ  ಕುಟುಂಬ ಬದುಕಿನ ಸಂಕೀರ್ಣ ತೆಗಳು ಹಾಗೂ ಆರೋಗ್ಯಕರವಲ್ಲದ ಗೃಹ ವಾತಾವರಣ ಚರ್ಚೆಯಾಗುತ್ತಿದೆ. ಈ ವಿಷಯದ ವಿರುದ್ಧ ವಾರ್ಡ್ ಮಟ್ಟದ ಜಾಗೃತಾ ಸಮಿತಿ ಗಳ ಮೂಲಕ ತಿಳುವಳಿಕೆ ಮೂಡಿಸಬೇಕಾಗಿದೆ. ಪತಿ-ಪತ್ನಿಯರ ಮಧ್ಯೆ ಇರುವ ಸಣ್ಣ ಸಮಸ್ಯೆಗಳನ್ನು ಹೆತ್ತವರು ಮಧ್ಯಪ್ರವೇಶಿಸಿ ಸಂಕೀರ್ಣಗೊಳಿಸುತ್ತಿರುವುದು ಕಂಡು ಬರುತ್ತಿದೆ.

ಆರೋಗ್ಯಕರವಾದ ಕುಟುಂಬ ಸಂಬಂಧಗಳು ದಾಂಪತ್ಯ, ಸೌಹಾರ್ದತೆ ಮೊದಲಾದ ವಿಷಯಗಳಲ್ಲಿ ರಾಜ್ಯ ಮಹಿಳಾ ಆಯೋಗ ತಿಳುವಳಿಕೆ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಅವರು ನುಡಿದರು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ದೂರು, ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಇಂಟರ್‌ನಲ್ ಸಮಿತಿ ಅಗತ್ಯವೆಂಬ ಕಾನೂನು ಇದ್ದರೂ ಸಮಿತಿಗಳ ಚಟುವಟಿಕೆ ನಡೆಯದಿರುವುದರಿಂದ ಆ ರೀತಿಯ ದೂರುಗಳು ಕೂಡಾ ಆಯೋಗದ ಬಳಿ ತಲುಪುತ್ತಿದೆ ಎಂದವರು ನುಡಿದರು.

ಅದಾಲತ್‌ನಲ್ಲಿ ಏಳು ದೂರುಗಳಿಗೆ ತೀರ್ಪು ನೀಡಲಾಯಿತು. ಮೂರು ದೂರುಗಳ ಬಗ್ಗೆ ಪೊಲೀಸರಿಂದ ವರದಿ ಆಗ್ರಹಿಸಲಾಗಿದೆ. 27 ದೂರುಗಳನ್ನು ಮುಂದಿನ ಅದಾಲತ್‌ಗೆ ಮುಂದೂಡಲಾಗಿದೆ. ಒಟ್ಟು ೩೩ ದೂರುಗಳನ್ನು ಪರಿಗಣಿಸಲಾಗಿದೆ. ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ. ಕುಂಞಾಯಿಷ, ನ್ಯಾಯವಾದಿ ಪಿ. ಸಿಂಧು, ಫ್ಯಾಮಿಲಿ ಕೌನ್ಸಿಲರ್ ರಮ್ಯಾ ಶ್ರೀನಿವಾಸನ್, ವನಿತಾ ಸರ್ಕಲ್ ಇನ್ಸ್‌ಪೆಕ್ಟರ್ ವಿ. ಸೀತಾ, ಡಬ್ಲ್ಯುಸಿಪಿಒ ಕೆ.ಸಿ. ಶೀಮಾ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page