ಮಹಿಳಾ ಲೀಗ್ ರಾಜ್ಯ ಕೋಶಾಧಿಕಾರಿ ನಿಧನ
ಕಾಸರಗೋಡು: ಮಹಿಳಾ ಲೀಗ್ ರಾಜ್ಯ ಕೋಶಾಧಿಕಾರಿ ಕಾಞಂ ಗಾಡ್ ಕೊಳವಯಲ್‌ನ ಪಿ.ಪಿ. ನಸೀಮ ಟೀಚರ್ (50) ನಿಧನಹೊಂ ದಿದರು.
ಇಂದು ಬೆಳಿಗ್ಗೆ ಕಲ್ಲಿ ಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಅಜಾನೂರು ಪಂಚಾಯತ್ ಮಾಜಿ ಅಧ್ಯಕ್ಷೆ ಯಾದ ನಸೀಮ ಟೀಚರ್ ಕಾಞಂಗಾಡ್ ಇಕ್ಭಾಲ್ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಯಾಗಿದ್ದಾರೆ. ಇವರು ಮಹಿಳಾ ಲೀಗ್ ಕಾಸರ ಗೋಡು ಜಿಲ್ಲಾ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃತರು ಪತಿ ಮಹಮ್ಮದ್ ಕುಂಞಿ, ಮಕ್ಕಳಾದ ಮನ್ಸೂರ್, ನಸ್ರಿ, ಅಳಿಯ ನೌಶಾದ್, ಸಹೋ ದರ-ಸಹೋದರಿಯರಾದ ಸಲಾಂ, ನಾಸರ್, ಬಶೀರ್, ಮರಿಯಾಂ, ಸಫಿಯಾ, ನಫೀಸ, ಮೈಮೂನ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.