ಮಹಿಳೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಪೆರ್ಲ: ಮಹಿಳೆ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೆರ್ಲ ಸಮೀಪದ ನಲ್ಕ ನಿವಾಸಿ ನಾರಾಯಣ ಪಾಟಾಳಿ ಯವರ ಪತ್ನಿ ಯಶೋಧ (೫೧) ಸಾವನ್ನಪ್ಪಿದ ಮಹಿಳೆ. ಬದಿಯಡ್ಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ದರು. ಮೃತದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿ ಲಾಯಿತು. ಐತ್ತಪ್ಪ ಪಾಟಾಳಿ-ಸಂಜೀವಿ ದಂಪತಿಯ ಪುತ್ರಿಯಾಗಿ ರುವ ಯಶೋಧ ಮಕ್ಕಳಾದ ಮಣಿಕಂಠ, ಅಜಿತ್, ಶ್ರೀದುರ್ಗಾ, ಸಹೋದರ-ಸಹೋದರಿಯರಾದ ಅಪ್ಪು ಪಾಟಾಳಿ, ಮಾಧವ ಪಾಟಾಳಿ, ಮಾಲತಿ, ಪ್ರೇಮ, ಪದ್ಮಾವತಿ, ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.