ಮಾಂಸಕೋಳಿ ಬೆಲೆ ಗಗನಕ್ಕೆ: ಗ್ರಾಹಕರು ಸಮಸ್ಯೆಯಲ್ಲಿ
ಕಾಸರಗೋಡು: ಮಾಂಸ ಕೋಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು ಇದರಿಂದ ಗ್ರಾಹಕರು ಸಂಕಷ್ಟಕ್ಕೀಡಾ ಗಬೇಕಾದ ಸ್ಥಿತಿ ಎದುರಾಗಿದೆ.
ಕಾಸರಗೋಡು ಹಾಗೂ ಪರಿಸರ ಪ್ರದೇಶದಲ್ಲಿ ಮಾಂಸ ಕೋಳಿ ಕಿಲೋಗೆ 145ರೂ.ಗೇರಿದೆ. ಒಂದು ತಿಂಗಳ ಹಿಂದೆ 105 ರೂ. ಇದ್ದ ಬೆಲೆ ಇದೀಗ 40 ರೂ.ಗಳ ಹೆಚ್ಚಳವಾಗಿರು ವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಇದೇ ವೇಳೆ ಯಾವುದೇ ನಿಯಂತ್ರಣವಿಲ್ಲದೆ ಕೋಳಿ ಬೆಲೆ ಏರಿಸುವುದರ ವಿರುದ್ಧ ಹೋಟೆಲ್ ವ್ಯಾಪಾರಿಗಳ ಸಹಿತ ಗ್ರಾಹಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ತಿಂಗಳಿಗೊಮ್ಮೆ ಬೆಲೆಯೇರಿಕೆಯಾಗುತ್ತಿತ್ತು. ಆದರೆ ಈಗ ಪ್ರತೀ ವಾರ, ಪ್ರತೀ ದಿನ ಬೆಲೆಯೇರಿಕೆ ಮಾಡುತ್ತಿರುವುದಾಗಿ ಆರೋಪವುಂಟಾಗಿದೆ.
ಈ ಹಿಂದೆ ತಮಿಳುನಾಡು, ಕರ್ನಾಟಕದಿಂದ ಕಾಸರಗೋಡಿಗೆ ಮಾಂಸಕೋಳಿ ತರಲಾಗುತ್ತಿತ್ತು. ಆದರೆ ಈಗ ಜಿಲ್ಲೆಯಲ್ಲೇ ಕೋಳಿ ಸಾಕಣೆ ಕೇಂದ್ರಗಳಿದ್ದರೂ ಬೆಲೆ ಏರಿಕೆಗೆ ಕಾರಣವೇನೆಂದು ತಿಳಿಯದೆ ಗೊಂದಲ ಸೃಷ್ಟಿಯಾಗಿದೆ. ಇದೇ ವೇಳೆ ಕೋಳಿ ಆಹಾರಕ್ಕೆ ಬೆಲೆಯೇರಿಕೆ, ಕೋಳಿಗಳು ಸಾವಿಗೀಡಾಗುವುದೇ ಬೆಲೆಯೇರಿಕೆಗೆ ಕಾರಣವೆಂದು ಹೇಳಲಾಗುತ್ತಿದೆ.