ಮಾಜಿ ನಗರಸಭಾ ಅಧಕ್ಷರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ನ್ಯಾಯಾಲಯದ ಮುಂದೆ ಘೋಷಣೆ ಮೊಳಗಿಸಿದ ಆರೋಪಿ ಮಾವೋವಾದಿ ನಾಯಕ
ಕಾಸರಗೋಡು: ಕಾಞಂಗಾಡ್ ನಗರಸಭಾ ಅಧ್ಯಕ್ಷರಾಗಿದ್ದ ವೇಳೆ ಎನ್.ಎ. ಖಾಲೀದ್‌ರನ್ನು 2007ರಲ್ಲಿ ಕಾಞಂಗಾಡ್ ನಗರಸಭಾ ಕಚೇರಿಯಲ್ಲಿ ಕೊಲೆಗೈಯಲೆತ್ನಿಸಿದ ಪ್ರಕರಣದ ಆರೋಪಿ ಮಾವೋವಾದಿ ನೇತಾರ ಸೋಮನ್‌ರನ್ನು ಪ್ರಸ್ತುತ ಪ್ರಕರಣ ವಿಚಾರಣೆಗಾಗಿ ಪೊಲೀಸರು ನಿನ್ನೆ ವಿಚಾರಣಾ ನ್ಯಾಯಾಲಯವಾದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ಕ್ಕೆ ಕರೆತರುವ ವೇಳೆ ಆತ ನ್ಯಾಯಾಲ ಯದ ಮುಂದೆ ಜೋರಾಗಿ ಘೋಷಣೆ ಮೊಳಗಿಸಿದ್ದಾನೆ.
ಪಶ್ಚಿಮ ಘಟ್ಟ ಸಂರಕ್ಷಿಸಿರಿ, ಕಾರ್ಪರೇಟ್ ಶಕ್ತಿಗಳಿಗೆ ಕಡಿವಾಣ ಹಾಕಿರಿ, ಸಾಮ್ರಾಜ್ಯಶಾಹಿ ಶಕ್ತಿಗಳೇ ತೊಲಗಿರಿ, ಇಂಕ್ಯುಲಾಬ್ ಜಿಂದಾ ಬಾದ್ ಎಂಬಿತ್ಯಾದಿ ಘೋಷಣೆಗಳನ್ನು ಆತ ನಿನ್ನೆ ನ್ಯಾಯಾಲಯದ ಮುಂದೆ ಮೊಳಗಿಸಿದ್ದಾನೆ. ಆಗ ಜತೆಗಿದ್ದ ಆತನನ್ನು ಪೊಲೀಸರು ತಡೆದರು.
ಮಾಜಿ ನಗರಸಭಾ ಅಧ್ಯಕ್ಷರನ್ನು ಕೊಲೆಗೈಯಲೆತ್ನಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಿನ್ನೆ ಆರಂಭಗೊಂಡಿತ್ತು. ಅದಕ್ಕಾಗಿ ಸೋಮನ್‌ನನ್ನು ಜೈಲಿನಿಂದ ಪೊಲೀಸರು ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ತರುತ್ತಿದ್ದಂತೆಯೇ ಆತ ನ್ಯಾಯಾಲಯದ ಮುಂದೆ ಘೋಷಣೆ ಮೊಳಗಿಸಿದ್ದಾನೆ.
ಕೆಲವು ದಿನಗಳ ಹಿಂದೆಯಷ್ಟೇ ಉಡುಪಿ ಬಳಿ ಕರ್ನಾಟಕ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಮಾವೋವಾದಿ ನೇತಾರ ವಿಕ್ರಂ ಗೌಡನ ಜತೆ ಅರಣ್ಯ ಪ್ರದೇಶಗಳಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದ ಸೋಮನ್‌ನನ್ನು ಕಳೆದ ಜುಲೈ ೨೮ರಂದು ಕೇರಳ ನಕ್ಸಲ್ ನಿಗ್ರಹ ಪಡೆಯವರು ಶೊರ್ನೂರು ಬಳಿಯಿಂದ ಬಂಧಿಸಿದ್ದರು. ನಂತರ ನ್ಯಾಯಾಲಯದ ಬಂಧನಕ್ಕೊಳ ಗಾಗಿದ್ದ ಆತನನ್ನು ದಿನಗಳ ಹಿಂದೆ ಕಾಸರಗೋಡು ನ್ಯಾಯಾಲ ಯಕ್ಕೆ ಕರೆತಂದು ಮಾಜಿ ನಗರಸಭಾ ಅಧ್ಯಕ್ಷರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಚಾರ್ಜ್ ಶೀಟನ್ನು ನ್ಯಾಯಾಲಯದಲ್ಲಿ ಆತನಿಗೆ ಓದಿ ತಿಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಿನ್ನೆ ನ್ಯಾಯಾಲಯದಲ್ಲಿ ಆರಂಭಗೊಂಡಿದ್ದು, ಅದಕ್ಕಾಗಿ ಸೋಮನ್‌ನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪೊಲೀಸರು ನ್ಯಾಯಾಲಯಕ್ಕೆ ಕರೆತರುತ್ತಿದ್ದ ವೇಳೆ ಆತ ಘೋಷಣೆ ಮೊಳಗಿಸಿದ್ದಾನೆ. ಈ ಕೊಲೆ ಯತ್ನ ಪ್ರಕರಣದ ವಿಚಾರಣೆ ಇನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ.