ಮಾಜಿ ನಗರಸಭಾ ಅಧ್ಯಕ್ಷರ ವಿರುದ್ಧ ಮುಸ್ಲಿಂಲೀಗ್ ಶಿಸ್ತುಕ್ರಮ: ಪಕ್ಷದ ಸ್ಥಾನಗಳಿಂದ ಹೊರಕ್ಕೆ
ಕಾಸರಗೋಡು: ಪಕ್ಷದ ಅನುಮತಿ ಇಲ್ಲದೆ ಕಾಸರಗೋಡು ನಗರಸಭಾ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಸರಗೋಡು ನಗರಸಭೆಯ ಮಾಜಿ ಅಧ್ಯಕ್ಷ ವಿ.ಎಂ. ಮುನೀರ್‌ರನ್ನು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯತನ ಸೇರಿದಂತೆ ಪಕ್ಷದ ಇತರ ಎಲ್ಲಾ ಸ್ಥಾನ ಗಳಿಂದ ಮುಸ್ಲಿಂ ಲೀಗ್ ಹೊರತುಪಡಿಸಿದೆ.
ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಲ್ಲೆಟ್ರ ಮಾಹಿನ್ ಹಾಜಿ ತಿಳಿಸಿ ದ್ದಾರೆ. ಈ ಹಿಂದೆ ಮಾಡಿಕೊಳ್ಳ ಲಾದ ತೀರ್ಮಾನ ಪ್ರಕಾರ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿವಂತೆ ಮುಸ್ಲಿಂ ಲೀಗ್ ಜಿಲ್ಲಾ ನೇತೃತ್ವ ಮತ್ತು ಮಂಡಳಿ ವಿ.ಎಂ. ಮುನೀರ್‌ರಲ್ಲಿ ಆಗ್ರಹಪಟ್ಟಿತ್ತು. ಆದರೆ ನಗರಸಭಾ ಅಧ್ಯಕ್ಷ ಸ್ಥಾನದ ಜತೆಗೆ ಅವರು ತಮ್ಮ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಪಕ್ಷದ ಅನುಮತಿ ಇಲ್ಲದೆ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಶಿಸ್ತು ಉಲ್ಲಂಘನಾ ಕ್ರಮವಾಗಿದೆ ಯೆಂದೂ, ಆ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಎಲ್ಲಾ ಸ್ಥಾನ ಮಾನಗಳಿಂದ ಹೊರತುಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆಯೆಂದು ಮುಸ್ಲಿಂ ಲೀಗ್ ತಿಳಿಸಿದೆ.
ಕಳೆದ ಬಾರಿ ಕಾಸರಗೋಡು ನಗರಸಭೆಯ ೨೪ನೇ ವಾರ್ಡ್‌ನಿಂದ ವಿ.ಎಂ. ಮುನೀರ್ ಮುಸ್ಲಿಂ ಲೀಗ್ ಕೌನ್ಸಿಲರ್ ಆಗಿ ಆಯ್ಕೆಗೊಂಡಿ ದ್ದರು. ಅಂದು ಮುಸ್ಲಿಂ ಲೀಗ್‌ನಲ್ಲಿ ಕೈಗೊಳ್ಳಲಾದ ತೀರ್ಮಾನದಂತೆ ಅವರನ್ನು ಬಳಿಕ ಎರಡೂವರೆ ವರ್ಷ ತನಕ ಕಾಸರಗೋಡು ನಗರಸಭಾ ಅಧ್ಯಕ್ಷರನ್ನಾಗಿ ನೇಮಿಸ ಲಾಗಿತ್ತು. ಆ ನಿಗದಿತ ಎರಡೂವರೆ ವರ್ಷದ ಸಮಯ ಪೂರ್ಣ ಗೊಂಡ ಬಳಿಕ ಅವರು ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲದೆ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷ ರಾಗಿ ಮುಸ್ಲಿಂ ಲೀಗ್‌ನ ಅಬ್ಬಾಸ್ ಬೀಗಂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಮುನೀರ್ ಭಾಗವಹಿಸಿರಲಿಲ್ಲ.