ಮಾಜಿ ನೇಶನಲ್ ಯೂತ್‌ಲೀಗ್ ನೇತಾರ, ಯುವ ಉದ್ಯಮಿ ಬಿಜೆಪಿ ಸೇರ್ಪಡೆ
ಹೊಸದುರ್ಗ: ಎಡರಂಗದ ಘಟಕ ಪಕ್ಷವಾದ ನೇಶನಲ್ ಲೀಗ್‌ನ ಯುವ ಜನ ವಿಭಾಗವಾದ ಎನ್.ವೈ.ಎಲ್‌ನ ಮಂಡಲ ಕಮಿಟಿ ಮಾಜಿ ಪದಾಧಿಕಾರಿಯೂ, ಯುವ ಉದ್ಯಮಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಎನ್‌ವೈಎಲ್ ಮಾಜಿ ಮಂಡಲ ಕೋಶಾಧಿಕಾರಿ ಕುಳಿಯಂಗಾಲ್‌ನ ಪಿ.ಎಂ. ಸುಹೈಲ್, ಕುಳಿಯಂಗಾಲ್ ನಿವಾಸಿಯೂ ಯುವ ಉದ್ಯಮಿಯಾದ ಎಂ.ಕೆ. ರಿಯಾದ್ ಎಂಬಿವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರನ್ನು ನಿನ್ನೆ ಕಾಞಂಗಾಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಅವರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಪಿ.ಎಂ. ಸುಹೈಲ್ ಈ ಹಿಂದೆ ಸಂಘಟನಾ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ವಾಗತ ಕಾರ್ಯಕ್ರಮದಲ್ಲಿ ಬಿಜೆಪಿ ನಗರಸಭಾ ಸಮಿತಿ ಅಧ್ಯಕ್ಷ ಎ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಉಪಾಧ್ಯಕ್ಷ ಎಂ. ಬಲ್‌ರಾಜ್, ಮಂಡಲ ಅಧ್ಯಕ್ಷ ಎಂ. ಪ್ರಶಾಂತ್, ಪಿ. ಪದ್ಮನಾಭನ್, ಬಿಜಿ ಬಾಬು, ರಿಶಾದ್, ಸುಲ್ಲಮಿ, ಎ.ವಿ. ಚಂದ್ರನ್, ಎನ್.ಅಶೋಕ್ ಕುಮಾರ್, ಸಿ.ವಲ್ಸಲನ್, ವೀಣಾ ದಾಮೋದರನ್, ಎಚ್.ಆರ್. ಶ್ರೀಧರನ್, ಎಚ್.ಆರ್. ಕುಸುಮ, ಸೌದಾಮಿನಿ, ಎಲ್.ಆರ್. ಸುಕನ್ಯ, ಶಾಲಿನಿ ಪ್ರಭಾಕರನ್ ಮೊದಲಾದವರು ಉಪಸ್ಥಿತರಿದ್ದರು.