ಮಾತೃಶಕ್ತಿ ದೇಶದ ಸಂಪತ್ತು-ಅಂಜು ಜೋಸ್ಟಿ
ಮಂಜೇಶ್ವರ: ವರ್ಕಾಡಿ ಪಂಚಾಯತ್ ಬಿಜೆಪಿ ಮಾತೃ ವಂದನೆ ಕಾರ್ಯಕ್ರಮ ವರ್ಕಾಡಿ ವಿಶ್ವಪ್ರಭಾ ಸಭಾಂಗಣದಲ್ಲಿ ಜರಗಿತು. ಯುವಮೋರ್ಚಾ ಜಿಲ್ಲಾಧ್ಯಕ್ಷೆ ಅಂಜು ಜೋಸ್ಟಿ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಸ್ತ್ರೀಯರ ಕೊಡುಗೆ ಅಪಾರ ವಾದದ್ದು, ನರೇಂದ್ರ ಮೋದಿ ಆಡಳಿತದ ಕೇಂದ್ರ ಸರಕಾರ ಸ್ತ್ರಿಯರನ್ನು ಸ್ವಾವಲಂಬಿ ಮಾಡಿದೆ.
ಗರ್ಭಿಣಿಯರಿಗೆ ಮಾತೃ ವಂದನ್ ಪೋಷಕಾಂಶ ಆಹಾರ, ಉಜ್ವಲ ಗ್ಯಾಸ್ ಯೋಜನೆ, ಬೇಟಿ ಬಚಾವೋ ಬೇಟಿ ಪಡವೋ, ಸುಕನ್ಯಾ ಯೋಜನೆ, ಇನ್ಸೂರೆನ್ಸ್ ಯೋಜನೆ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಕುಟುಂಬ ಶ್ರೀ, ಉದ್ಯೋಗ ಖಾತರಿ ಯೋಜನೆ, ಆಯುಷ್ಮಾನ್ ಅರೋಗ್ಯ, ಮುದ್ರಾ ಲೋನ್, ವಿಶ್ವ ಕರ್ಮ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆ ಹೀಗೆ ನೂರಾರು ಯೋಜನೆಗಳು ಸ್ತ್ರೀಯರನ್ನ ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ಹೇಳಿದರು. ಸರಸ್ವತಿ ಹೊಳ್ಳ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲÁಧ್ಯಕ್ಷ ಆದರ್ಶ್ ಬಿ.ಎಂ ಮಾತನಾಡಿದರು. ಮುಖಂಡರಾದ ಮಣಿಕಂಠ ರೈ, ಅಶ್ವಿನಿ ಎಂ ಎಲ್, ಭಾಸ್ಕರ ಪೊಯ್ಯೆ, ಯತೀರಾಜ್ ಶೆಟ್ಟಿ,ಜಗದೀಶ ಚೆಂಡ್ಲಾ, ರಕ್ಷನ್ ಅಡಕಲಾ, ಮಮತಾ ವರ್ಕಾಡಿ, ರಾಜ್ ಕುಮಾರ, ರವಿರಾಜ್ ಜನಪ್ರತಿನಿದಿsಗಳು, ಕಾರ್ಯಕರ್ತರು ಉಪಸ್ಥಿತರಿದ್ದರು, ತುಳಸಿ ಕುಮಾರಿ ಸ್ವಾಗತಿಸಿ, ವಂದಿಸಿದರು.