ಮಾದಕದ್ರವ್ಯ ಮಾರಾಟ ಮಾಫಿಯಾ ವಿರುದ್ಧ ಡಿಫಿ ಪ್ರತಿರೋಧ
ಮಿಂಜ: ಮಾದಕ ದ್ರವ್ಯ ಮಾರಾಟ ಹಾಗೂ ಉಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ಡಿಫಿ ನೇತೃತ್ವದಲ್ಲಿ ರಾಜ್ಯದಾದÀ್ಯಂತ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ಮೀಯಪದವುನಲ್ಲಿ ಮಾದಕ ದ್ರವ್ಯ ವಿರುದ್ಧ ಜಾಗೃತ ಪರೇಡ್ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾತ್ ಉದ್ಘಾಟಿಸಿದರು. ನಾಡಿನಲ್ಲಿ ನಡೆಯುತ್ತಿ ರುವ ಮಾದಕ ವಸ್ತುಗಳ ಹೆಚ್ಚಳ ಹಾಗೂ ಆಕ್ರಮಣಗಳು ನಾಡಿನ ಶಾಂತಿಯನ್ನು ಕೆಡಿಸುತ್ತಿದೆ. ಇದು ಖಂಡನೀಯ ವಾಗಿದೆ. ಆಕ್ರಮಣಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಊರಿನ ಸಮಾಧಾನ ಕೆಡೆಸುವ ಶ್ರಮಗಳನ್ನು ಜನರೊಂದಿಗೆ ನಿಂತು ಡಿಫಿ ಪ್ರತಿರೋದಿsಸುತ್ತದೆ ಎಂದು ಅವರು ಮಾತನಾಡಿದರು. ಬ್ಲೋಕ್ ಸಮಿತಿ ಅಧ್ಯಕ್ಷ ಆಕಾಶ್ ಕೋರಿಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜತೆ ಕಾರ್ಯ ದರ್ಶಿ ಸಾದಿಕ್ ಚೆರುಗೋಳಿ, ಜಿಲ್ಲಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ, ಉದಯ ಸಿ.ಎಚ್, ಪದ್ಮಜಾ ಕೂಳೂರು, ಅಕ್ಷಯ್ ಪಾವೂರ್ ಮಾತನಾಡಿದರು. ಬ್ಲೋಕ್ ಸಮಿತಿ ಕಾರ್ಯದರ್ಶಿ ವಿನಯ್ ಕುಮಾರ್ ಬಾಯಾರು ಸ್ವಾಗತಿಸಿದರು.