ಮಾದಕಪದಾರ್ಥ ಮಾರಾಟ ವೇಳೆ ಮಂಜೇಶ್ವರ ನಿವಾಸಿ ಸಹಿತ ಇಬ್ಬರು ಕದ್ರಿಯಲ್ಲಿ ಸೆರೆ
ಮಂಜೇಶ್ವರ: ಮಂಗಳೂರು ಕದ್ರಿ ಪಾರ್ಕ್ ಪರಿಸರದಲ್ಲಿ ಮಾದಕ ಪದಾರ್ಥ (ಎಂಡಿಎಂಎ) ಮಾರಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ನಿವಾಸಿಯೋರ್ವನ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂ ಜೇಶ್ವರ ಪಾವೂ ರು ಮಚ್ಚಂಪಾಡಿ ನಿವಾಸಿ ನವಾಜ್ (೪೦), ಬಂಟ್ವಾಳ ಫರಂಗಿಪೇಟೆ ಜುಮಾ ದಿಗುಡ್ಡೆಯ ಅಜರುದ್ದೀನ್ ಅಲಿಯಾಸ್ ಅಝರ್ (೩೮) ಬಂಧಿತರಾದವರು. ಇವರಿಂದ ೧೨೦ ಗ್ರಾಂ ತೂಕದ ೬ ಲಕ್ಷ ರೂ. ಮೌಲ್ಯದ ಎಂಡಿಎಂಎ, ೩ ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ, ಬೈಕ್ ಸೇರಿದಂತೆ ಒಟ್ಟು ೬,೮೩,೧೨೦ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.
ಆರೋಪಿಗಳ ವಿರುದ್ಧ ಕೊಣಾಜೆ, ಬಂಟ್ವಾಳ ಠಾಣೆಯಲ್ಲಿ ಇತರ ಪ್ರಕರ ಣಗಳಲ್ಲೂ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.