ಮಾದಕಪದಾರ್ಥ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಂದಾಗಿ ಕೈಜೋಡಿಸಬೇಕು-ಯು.ಟಿ.ಖಾದರ್
ಕುಂಬಳೆ: ಮಾದಕ ಪದಾರ್ಥ ವೆಂಬ ವಿಪತ್ತನ್ನು ನಮ್ಮ ಊರಿನಿಂದ ಹೊರದಬ್ಬಲು ನಾವೆಲ್ಲಾ ಸದಾ ಸಮಯ ಎಚ್ಚರಿಕೆಯಿಂದಿರ ಬೇಕಾಗಿದೆಯೆಂದು, ಅಡ್ಕ ಮಾದಕ ಪದಾರ್ಥ ವಿರುದ್ಧ ಒಕ್ಕೂಟ ನಡೆಸುವ ಹೋರಾಟ ಇತರ ಪ್ರದೇಶಗಳಿಗೂ ವಿಸ್ತರಿಸಬೇಕೆಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ನುಡಿದರು. ಅಡ್ಕ ಮಾದಕಪದಾರ್ಥ ವಿರುದ್ಧ ಒಕ್ಕೂಟದ ಪ್ರಥಮ ವಾರ್ಷಿಕದಂಗವಾಗಿರುವ ರ‍್ಯಾಲಿ ಹಾಗೂ ಸಾರ್ವಜನಿಕ ಸಮ್ಮೇಳನ ವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಕಾನೂನು ಪಾಲಕರನ್ನು ವಿಶ್ವಾಸಕ್ಕೆ ತೆಗೆದು ಊರೆಲ್ಲಾ ಒಂದಾಗಿ ನಿಂತರೆ ಮಾತ್ರವೇ ಮಾದಕ ಪದಾರ್ಥವೆಂಬ ವಿಪತ್ತನ್ನು ನಮಗೆ ತೊಡೆದು ನೀಗಿಸಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು. ಬಂದ್ಯೋಡಿನಿಂದ ಆರಂಭಿಸಿದ ರ‍್ಯಾಲಿಯನ್ನು ಇಬ್ರಾಹಿಂ ಒ.ಕೆ ಉದ್ಘಾಟಿಸಿದರು.
ನೂರಾರು ಮಂದಿ ಭಾಗವಹಿ ಸಿದರು. ಸ್ಥಳೀಯ ಶಾಲೆಗಳು, ಕಾಲೇಜುಗಳು, ಕ್ಲಬ್‌ಗಳು,ವ್ಯಾಪಾರ ಸಂಸ್ಥೆಗಳು, ಅನಿವಾಸಿಗಳು, ಆಟೋ ಕಾರ್ಮಿಕರು ಮೊದಲಾದವರ ಬೆಂಬಲದಲ್ಲಿ ಸಮ್ಮೇಳನ ಆಯೋಜಿಸ ಲಾಗಿತ್ತು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ರಘುನಾಥ್ ಪ್ರಧಾನ ಭಾಷಣ ಮಾಡಿದರು. ಆರ್ಜಿತ ಹಿಂದೂ ಸಮಾಜ ಪ್ರಸಿಡೆಂಟ್ ಸ್ವಾಮಿ ಆತ್ಮಾದಾಸ್ ಮುಖ್ಯ ಅತಿಥಿಯಾಗಿ ದ್ದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಜಿಲ್ಲಾ ಪಂಚಾಯತ್ ಸದಸ್ಯ ರಹ್ಮಾನ್ ಗೋಲ್ಡನ್, ಜನಮೈತ್ರಿ ಪೊಲೀಸ್ ಆಫೀಸರ್ ಮಧು, ಸಮಿತಿ ಅಧ್ಯಕ್ಷ ಬಿ.ಎಂ.ಪಿ ಅಬ್ದುಲ್ಲ, ಅಸೀಸ್ ಟಿಂಬರ್, ಶಾಹುಲ್ ಹಮೀದ್ ಮಾತನಾಡಿದರು. ಹುಸೈನ್ ಅಡ್ಕ ವಂದಿಸಿದರು.