ಮಾದಕಮುಕ್ತ ಸಮಿತಿ ಪದಾಧಿಕಾರಿಗೆ ಬೆದರಿಕೆ: ಕೇಸು ದಾಖಲು

ಕುಂಬಳೆ: ಮಾದಕಮುಕ್ತ  ಸಮಿತಿಯ ಪದಾಧಿಕಾರಿಗೆ ಬೆದರಿಕೆ ಯೊಡ್ಡಿದ ಆರೋಪದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಬಂದ್ಯೋಡು ಅಡ್ಕದ ಅಮ್ಮಿ ಯಾನೆ ಢಿಕ್ಕಿ ಅಮ್ಮಿ ಎಂಬಾತನ ವಿರುದ್ಧ ಕುಂ ಬಳ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.  ಮಾದಕಮುಕ್ತ ಸಮಿತಿಯ ಪದಾಧಿಕಾರಿ ಬಂದ್ಯೋ ಡು ಅಡ್ಕದ ಬಿ.ಎಂ. ಅಬ್ದುಲ್ಲ (54) ಎಂಬವ ರಿಗೆ ಬೆದರಿಕೆಯೊಡ್ಡಿದ ಆರೋಪದಂತೆ ಈ ಕೇಸು ದಾಖಲಿಸಲಾಗಿದೆ.

ಕಳೆದ ಜುಲೈ ೧೨ರಂದು ಘಟನೆ ನಡೆದಿದೆ. ಅಂದು ಬಂದ್ಯೋಡು ಅಡ್ಕದಲ್ಲಿ ಮಾದಕಮುಕ್ತ ಸಮಿತಿಯ ಸಭೆ ನಡೆಸಲಾಗಿತ್ತು. ಸಭೆ  ನಡೆಯುತ್ತಿದ್ದಂತೆ ಅಲ್ಲಿಗೆ ತಲುಪಿದ ಅಮ್ಮಿ ಯಾನೆ ಢಿಕ್ಕಿ ಅಮ್ಮಿ ಅಬ್ದುಲ್ಲರಿಗೆ ಬೆದರಿಕೆಯೊಡ್ಡಿದ್ದನೆಂದು ದೂರಲಾಗಿದೆ. ಈ ಬಗ್ಗೆ ಅದೇ ದಿನ ಪೊಲೀಸರಿಗೆ ದೂರು  ನೀಡಲಾಗಿತ್ತು. ಆದರೆ ಇದೀಗ ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page