ಮಾದಕವಸ್ತು ಸೇವನೆ: ಇಬ್ಬರ ಸೆರೆ
ಬದಿಯಡ್ಕ: ಮಾದಕವಸ್ತು ಸೇವಿಸುತ್ತಿದ್ದ ಇಬ್ಬರನ್ನು ಬದಿಯಡ್ಕ ಪೊಲೀಸರು ಸೆರೆಹಿಡಿದಿದ್ದಾರೆ. ಕಾಸರಗೋಡು ಬೆದಿರ ನಿವಾಸಿ ಮೊಹಮ್ಮದ್ ರಾಶಿ (34),ಬಿರ್ಮಿನಡ್ಕ ನಿವಾಸಿ ಶಾಹುಲ್ ಹಮೀದ್ (34) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಮೊಹಮ್ಮದ್ ರಾಶಿ ನಿನ್ನೆ ಸಂಜೆ ಕುಕ್ಕಂಕೂಡ್ಲು ಬಸ್ ತಂಗುದಾಣ ಸಮೀಪ ಎಂಡಿಎಂಎ ಸೇದುತ್ತಿದ್ದನೆನ್ನ ಲಾಗಿದೆ. ಅದೇ ರೀತಿ ಶಾಹುಲ್ ಹಮೀದ್ ಮಾನ್ಯ ಸಮೀಪ ಬಸ್ ತಂಗುದಾಣ ಬಳಿ ಗಾಂಜಾ ಸೇದುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.