ಮಾದಕ ದ್ರವ್ಯ ಕೈವಶವಿರಿಸಿದ ಓರ್ವನ ಸೆರೆ
ಮಂಜೇಶ್ವರ: ಮಂಜೇಶ್ವರ ಕುಂಜ ತ್ತೂರು ತೂಮಿನಾಡಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಇಸ್ಮಾಯಿಲ್ ಎಂಬಾತ .8512 ಗ್ರಾಂ ಮಾದಕ ದ್ರವ್ಯವಾದ ಮೆಥಾಫಿಟಾಮಿನ್ ಕೈವಶವಿರಿಸಿಕೊಂಡ ಆರೋಪದಂತೆ ಆತನನ್ನು ಅಬಕಾರಿ ತಂಡ ಬಂಧಿಸಿದೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ಅವರ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.
ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್)ಗಳಾದ ಮುರಳಿ ಕೆ.ವಿ, ಸಿ.ಕೆ.ವಿ. ಸುರೇಶ್, ಸಿಇಒಗಳಾದ ಮಂಜುನಾಥನ್, ಅತುಲ್, ರಾಜೇಶ್, ಮತ್ತು ಧನ್ಯ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.