ಮಾದಕ ಮೆಥಾಫಿಟಮಿನ್ ಪತ್ತೆ: ಇಬ್ಬರ ಸೆರೆ
ಕಾಸರಗೋಡು: ಚೆರ್ವತ್ತೂರಿ ನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 0.2975 ಗ್ರಾಂ ಮಾದಕ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಡನ್ನ ವಡಕ್ಕೇಪುರದ ಮೊಹಮ್ಮದ್ ಸಿನಾನ್ (22) ಮತ್ತು ಪಡನ್ನ ಕಡಪ್ಪುರದ ಖಾಸಿಂ ಅಲಿ (24) ಎಂಬಾವರನ್ನು ಬಂಧಿಸಿ ಅವರ ವಿರುದ್ಧ ಎನ್ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿತಂಡ ಇಂದು ಬೆಳಿಗ್ಗೆ ಈ ಕಾರ್ಯಾಚರಣೆ ನಡೆಸಿದೆ. ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಪಿ.ಕೆ.ವಿ. ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್)ಗಳಾದ ಪ್ರಶಾಂತ್ ಕುಮಾರ್.ವಿ, ನೌಶಾದ್ ಕೆ, ಅಜೀಶ್ ಕುಮಾರ್, ವಿ.ಅಜೀಶ್, ಸಿಇಒಗಳಾದ ಸತೀಶನ್ ಕೆ, ಅತುಲ್ ಮತ್ತು ಚಾಲಕ ಸುಜೀಶ್ ಪಿ. ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.