ಮಾದಕ ವಸ್ತು ಸಹಿತ ಓರ್ವ ಸೆರೆ
ಕಾಸರಗೋಡು: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1.280 ಗ್ರಾಂ ಎಂಡಿಎAಎ, 26.850 ಗ್ರಾಂ ಗಾಂಜಾ ಸಹಿತ ಓರ್ವ ಸೆರೆಗೀಡಾಗಿದ್ದಾನೆ. ಪೊಯಿನಾಚಿ ಚೆರುಕರ ಕಾಲನಿಯ ಅಬೂಬಕ್ಕರ್ ಸಿದ್ದಿಕ್ (33) ಎಂಬಾತನನ್ನು ಬೇಕಲ ಎಸ್.ಐ. ಸವ್ಯಸಾಚಿ ನೇತೃತ್ವದ ಪೊಲೀ ಸರು ಬಂಧಿಸಿದ್ದಾರೆ. ಪನಯಾಲ್, ಬಟ್ಟತ್ತೂರು ಚಂದ್ರಪುರ ರಸ್ತೆಯಲ್ಲಿ ಕುಣಿಕುನ್ನಿಲ್ ಎಂಬಲ್ಲಿAದ ಮಾದಕ ವಸ್ತು ವಶಪಡಿಸಲಾಗಿದೆ. ನಿನ್ನೆ ರಾತ್ರಿ 7.45ರ ವೇಳೆ ಪಾಲಕುನ್ನು ಭಾಗಕ್ಕೆ ತೆರಳುತ್ತಿದ್ದ ಆಟೋ ರಿಕ್ಷಾವನ್ನು ತಪಾಸಣೆ ಗೈದಾಗ ಮಾದಕ ವಸ್ತು ಪತ್ತೆಯಾಗಿದೆ.