ಮಾನ್ಯ ಪಾಂಡಿಮೂಲೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು-ಸಿಪಿಎಂ
ನೀರ್ಚಾಲು: ಮಾನ್ಯ ಪಾಂಡಿ ಮೂಲೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಸಿಪಿಎಂ ನೀರ್ಚಾಲು ಲೋಕಲ್ ಸಮ್ಮೇಳನ ಒತ್ತಾಯಿಸಿದೆ.
ತಲ್ಪನಾಜೆಯಲ್ಲಿ ನಡೆದ ಸಮ್ಮೇಳ ನವನ್ನು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ದರು. ಎಂ. ಮದನ, ಬಿ. ಶೋಭಾ, ಕೆ.ಎಂ. ಶಾಫಿ ಎಂಬಿವರು ಒಳಗೊಂಡ ಪ್ರೆಸೀಡಿಯಂ ಸಮ್ಮೇಳನವನ್ನು ನಿಯಂತ್ರಿಸಿತು. ಲೋಕಲ್ ಸೆಕ್ರೆಟರಿ ಯಾಗಿ ಸುಬೈರ್ ಬಾಪಾಲಿಪೊನ ಅವರನ್ನು ಪುನರಾಯ್ಕೆ ಮಾಡಲಾ ಯಿತು. ಎಂ. ಮದನ, ಶಾಫಿ ಕೆ.ಎಂ, ಅಬ್ದುಲ್ ಖಾದರ್ ಮಾನ್ಯ, ರಾಮಚಂದ್ರನ್ ಮಾನ್ಯ, ಉದಯ ಟಿ, ಸುರೇಶ್ ಪಿ, ಉದಯ ಪಣಿಕ್ಕರ್, ನವೀನ ಕುಮಾರಿ ಒಳಗೊಂಡ 9 ಮಂದಿ ಲೋಕಲ್ ಕಮಿಟಿಯನ್ನು ಆಯ್ಕೆ ಮಾಡ ಲಾಯಿತು. ನೀರ್ಚಾಲು ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಪಿ.ಕೆ. ನಿಶಾಂತ್ ಮುಖ್ಯ ಭಾಷಣ ಮಾಡಿದರು. ಏರಿಯಾ ಸಮಿತಿ ಸದಸ್ಯ ರಾದ ನ್ಯಾಯವಾದಿ ಪ್ರಕಾಶ್ ಅಮ್ಮಣ್ಣಾಯ, ಬಿ. ಶೋಭಾ ಮಾತನಾಡಿದರು. ಎಂ. ಮದನ ಅಧ್ಯಕ್ಷತೆ ವಹಿಸಿದರು. ಲೋಕಲ್ ಸೆಕ್ರೆಟರಿ ಸುಬೈರ್ ಬಾಪಾಲಿಪೊನ ಸ್ವಾಗತಿಸಿದರು.