ಮಾರಾಟಕ್ಕಾಗಿ ತಂದಿದ್ದ ಗಾಂಜಾ ವಶ: ಯುವಕ ಸೆರೆ

ಕಾಸರಗೋಡು: ಮಾರಾಟಕ್ಕಾಗಿ ತರಲಾಗಿದ್ದ ಗಾಂಜಾ ಸಹಿತ ಯುವಕನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಪಟೇಲ್ ರೋಡ್ ಗಜಾಲಿ ನಗರದ ಅಮೀನ್ ಸಿಜಾಹ್ (26) ಬಂಧಿತ ಆರೋಪಿ. ಈತ ನಿನ್ನೆ ತಳಂಗರೆ ಸಿವ್ಯೂ ಪಾರ್ಕ್‌ಗೆ ಬಂದಿದ್ದನೆಂದೂ ಆ ವೇಳೆ ಶಂಕೆಗೊಂಡ ಆತನನ್ನು ತಪಾಸಣೆಗೊಳಪಡಿಸಿದಾಗ ಆತನ ಕೈಯಲ್ಲಿ 7.67 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅದಕ್ಕೆ ಸಂಬಂಧಿಸಿ  ಆತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page