ಮಾವಿನಕಟ್ಟೆ ಶ್ರೀ ಅಯ್ಯಪ್ಪ ಮಂದಿರ ವಾರ್ಷಿಕೋತ್ಸವ ಆರಂಭ
ಬದಿಯಡ್ಕö: ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ೪೨ನೇ ವಾರ್ಷಿಕೋತ್ಸವ ಇಂದು ಹಾಗೂ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರಂಗವಾಗಿ ಬೆಳಗ್ಗೆ ದೀಪೋಜ್ವಲನ, ಮಹಾಗಣಪತಿ ಹವನ, ಮುದ್ರಾಧಾರಣೆ, ಭಜನೆ, ಬಳಿಕ ಸಿಂಗಾರಿ ಮೇಳ ಪ್ರದರ್ಶನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆ ಯಿತು.
ಅಪರಾಹ್ನ ಭಜನೆ, ಕುಣಿತ ಭಜನೆ, ಸಂಜೆ ನೂತನವಾಗಿ ನಿರ್ಮಿಸಿದ ಸಾಂಸ್ಕೃತಿಕ ಭವನದ ಉದ್ಘಾಟನೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನಿರ್ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ, ವಿಶ್ವನಾಥ ಡಿ. ಶೆಟ್ಟಿö, ತಲೇಕ ಸುಬ್ರಹ್ಮಣ್ಯ ಭಟ್, ಯೋಗೀಶ್ ಶರ್ಮಾ, ರಾಜನ್ ಪೆರಿಯಾ, ಶಿವಶಂಕರ ಎನ್.ನೆಕ್ರಾಜೆ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಡಾ. ರಾಜೇಂದ್ರ ಪಿಲಾಂಕಟ್ಟೆö, ಹರಿನಾರಾಯಣ ಮಾಸ್ತರ್, ಮುಖೇಶ್, ಕೃಷ್ಣ ಮಣಿಯಾಣಿ, ಸವಿತಾ, ಮೀನಾಕ್ಷಿö, ಭಾಷ್ಕರ ಪುರುಷ, ದಾಮೋದರ ಮೈಲುತೊಟ್ಟಿö, ವಿಶ್ವನಾಥ ಬಳ್ಳಪದವು, ರಾಜೇಶ್ ನೆಕ್ರಾಜೆ, ರಾಘವೇಂದ್ರ ಎಂ. ಉಪಸ್ಥಿತರಿ ರುವರು. ಈ ಸಂದರ್ಭದಲ್ಲಿ ಸುಜಾತ ಮಾಣಿಮೂಲೆ ಅವರನ್ನು ಗೌರವಿಸಲಾಗುವುದು. ರಾತ್ರಿ ಸತ್ಯನಾರಾಯಣ ಪೂಜೆ, ನೃತ್ಯ ಕಲಾ ಸಂಧ್ಯಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ.
ನಾಳೆ ಬೆಳಗ್ಗೆ ಭಜನೆ, ಸಂಗೀತ ಕಚೇರಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮನು ಪಣಿಕ್ಕರ್ ಬಳಗದವರಿಂದ ತಾಯಂಬಕ, ನಾರಂಪಾಡಿ ಕ್ಷೇತ್ರದಿಂದ ಮೆರವಣಿಗೆ ನಡೆಯ ಲಿದೆ. ರಾತ್ರಿ ಪಾಟು ಪೆಟ್ಟಿö, ಮಹಾ ಪೂಜೆ, ಅನ್ನಸಂತರ್ಪಣೆ ನಡೆ ಯಲಿದೆ. ಸಾಂಸ್ಕೃತಿಕ ಕಾರ್ಯ ಕ್ರಮದಂಗವಾಗಿ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾ ಸಂಘ ಇದರ ವತಿಯಿಂದ ದಕ್ಷ ಯಜ್ಞ ಗಧಾಯುದ್ಧ ಯಕ್ಷಗಾನ ಬಯಲಾಟ ನಡೆಯಲಿದೆ.