ಮೀನು ಮಾರ್ಕೆಟ್‌ಗೆ ತಲುಪಿದ ಬಾಲಕಿಗೆ ಆಕ್ರಮಣ: ಆರೋಪಿಯ ಪತ್ತೆಗೆ ಹುಡುಕಾಟ ಆರಂಭ
ಕಾಸರಗೋಡು: ಮಾರುಕಟ್ಟೆಯಿಂದ ಮೀನು ಖರೀದಿಸಲೆಂದು ತಲುಪಿದ 17ರ ಬಾಲಕಿ ವಿರುದ್ಧ ಲೈಂಗಿಕ ದೌರ್ಜನ್ಯ ಯತ್ನ ನಡೆದಿದೆ. ಅಕ್ರಮಿಯನ್ನು ತಡೆದು ನಿಲ್ಲಿಸಿದ ಬಾಲಕಿ ಬೊಬ್ಬೆ ಹಾಕಿದಾಗ ಆತ ಪರಾರಿಯಾಗಿದ್ದಾನೆ. ಬಾಲಕಿ ನೀಡಿದ ದೂರಿನಂತೆ ಮಹಿಳಾ ಪೊಲೀಸರು ತಲುಪಿ ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮಾರ್ಕೆಟ್‌ನಿಂದ ಮೀನು ಖರೀದಿಸಲೆಂದು ಬಂದಾಗ ಓರ್ವ ಈಕೆಯ ಹಿಂದಿನಿಂದ ಹಿಡಿದೆಳೆದಿರುವುದಾಗಿ ದೂರಲಾಗಿದೆ. ಬಾಲಕಿ ನೀಡಿದ ದೂರಿನಂತೆ ಶಾಫಿ ಎಂಬಾತನ ವಿರುದ್ಧ ಮಹಿಳಾ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಈತನ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ.