ಮುಂಗಡಪತ್ರದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ಮೊತ್ತ ಮೀಸಲು
ಕಾಸರಗೋಡು: ನಿನ್ನೆ ವಿಧಾನಸಭೆಯಲ್ಲಿ ಮಂಡಿಸಿದ ರಾಜ್ಯ ಮುಂಗಡಪತ್ರದಲ್ಲಿ ಜಿಲ್ಲೆಗೆ ಕೆಲವೊಂದು ಯೋಜನೆಗಳನ್ನು ಘೋಷಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ ೭೫ ಕೋಟಿ ರೂ, ಎಂಡೋಸಲ್ಫಾನ್ ಸಂತ್ರಸ್ತರಿಗೆ ೧೭ ಕೋಟಿ ರೂ. ಮೀಸಲಿಡಲಾಗಿದೆ.
ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಕವಿ ಟಿ ಉಬೈರ್ ಮಾಪಿಳ ಕಲಾ ಅಕಾಡೆಮಿಗೆ ಒಂದು ಕೋಟಿ ರೂ. ಮೀಸಲಿಡಲಾಗಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ೮ ಯೋಜನೆಗಳಿಗೆ ಮೊತ್ತ ಮೀಸಲಿಡಲಾಗಿದೆ. ಮುಟ್ಟಂ ಬೇರಿಕೆ ಬೀಚ್ ಟೂರಿಸಂ ಯೋಜನೆ, ಅಡ್ಕ- ಇಚ್ಲಂಗೋಡ್ ರಸ್ತೆ ಪುನರುದ್ಧಾರ, ನಯಾಬಜಾರ್- ಐಲ ಶಾಲೆ ರಸ್ತೆ ಪುನರುದ್ಧಾರ ಎಂಬಿವುಗಳಿಗೆ ೫೦ ಲಕ್ಷ ರೂ., ಎಣ್ಮಕಜೆ ಪಂ.ನ ಮೈದಾನ ಅಭಿವೃದ್ಧಿಗೆ ೧ ಕೋಟಿ ರೂ, ಮಂಜೇಶ್ವರ ಪಂ.ನ ಹೊಸಬೆಟ್ಟು ಬೀಚ್ ಟೂರಿಸಂ ಯೋಜನೆಗೆ ೫೦ ಲಕ್ಷ ರೂ, ಪೈವಳಿಕೆ ಪಂ.ನ ಸರ್ಕುತ್ತಿ- ಕನಿಯಾಲ ರಸ್ತೆ ಪುನರುದ್ಧಾರಕ್ಕೆ ೫೦ ಲಕ್ಷ ರೂ. , ಮಂಜೇಶ್ವರ ಬಂದರಿಗೆ ೫೦ ಲಕ್ಷ ರೂ. ಮಂಜೂರು ಮಾಡಲಾಗಿದೆ. ಜೊತೆಗೆ ಚೆರ್ವತ್ತೂರು, ನೀಲೇಶ್ವರಂ, ಕಾಸರಗೋಡು ಬಂದರು ಅಭಿವೃದ್ಧಿಗೂ ಮೊತ್ತ ಮೀಸಲಿಡ ಲಾಗಿದೆ. ಹೊಸತಾಗಿ ನರ್ಸಿಂಗ್ ಕಾಲೇಜು, ಕರಿಂದಳಂ ಏಕಲವ್ಯ ಸ್ಪೋರ್ಟ್ಸ್ ಶಾಲಾ ಕಟ್ಟಡಕ್ಕೂ ಮೊತ್ತ ಮೀಸಲಿಡ ಲಾಗಿದೆ. ಜಿಲ್ಲೆಯಲ್ಲಿ ಮಾದರಿ ಶಾಲೆ ಸ್ಥಾಪನೆಗೆ ಬಜೆಟ್‌ನಲ್ಲಿ ನಿರ್ದೇ ಶವಿದೆ. ವೀರ ಮಲಕುನ್ನ್ ಟೂರಿಸಂ ಯೋಜನೆಗೆ ೧೦ ಕೋಟಿ ರೂ. ಮೀಸಲಿಡ ಲಾಗಿದೆ. ಜಿಲ್ಲಾ ಪಿ.ಎಸ್.ಸಿ ಕಚೇರಿ ಕಟ್ಟಡ ನಿರ್ಮಾ ಣಕ್ಕೂ ಮೊತ್ತ ಮೀಸಲಿಡಲಾಗಿದೆ. ಚೀಮೇನಿ ಕೈಗಾರಿಕಾ ಪಾರ್ಕ್‌ಗೆ ೧೦ ಕೋಟಿ ರೂ. ಫಯರ್ ಸ್ಟೇಶನ್‌ಗೆ ೩ ಕೋಟಿ ರೂ. ಕಾಞಂಗಾಡ್ ರೆಸ್ಟ್ ಹೌಸ್ ಹಾಗೂ ಹೊಸ ರಸ್ತೆಗಳಿಗೆ ೧೦ ಕೋಟಿ ರೂ., ಕಾಸರಗೋಡು ಪೆರಿಯ ಏರ್ ಸ್ಟ್ರಿಪ್‌ಗೆ ೧.೧೦ ಕೋಟಿ ರೂ. ಮೀಸಲಿಡಲಾಗಿದೆ.